ಆರ್ತಾಜೆಯಲ್ಲಿ ರಸ್ತೆ ಬದಿ ಮಣ್ಣಿನ ಬರೆ ಹಾಗೂ ತೆಂಗಿನ ಮರ ಬಿದ್ದು ರಸ್ತೆ ಬದಿಯ ಚರಂಡಿ ಬ್ಲಾಕ್

0

ಬರೆ ಜರಿದು ಹತ್ತು ದಿನಗಳೇ ಕಳೆದರೂ ಕ್ರಮ ಕೈ ಗೊಳ್ಳದ ಸ್ಥಳೀಯ ಪಂಚಾಯತ್: ಸಾರ್ವಜನಿಕರ ಆರೋಪ

ಸುಳ್ಯದ ಸೋಣಂಗೇರಿ ಪೈಚಾರು ರಸ್ತೆ ಆರ್ತಾಜೆ ಬಳಿ ಕಳೆದ ಹತ್ತು ದಿನಗಳ ಹಿಂದೆ ರಸ್ತೆ ಬದಿಯ ಬರೆ ಕುಸಿದು ಬಿದ್ದು ಅಲ್ಲೇ ಪಕ್ಕದಲ್ಲಿದ್ದ ತೆಂಗಿನ ಮರವೊಂದು ಮಣ್ಣಿನ ಜೊತೆಯಲ್ಲಿ ಬಿದ್ದು ರಸ್ತೆ ಬದಿಯ ಚರಂಡಿ ಮುಚ್ಚಿಹೋಗಿದೆ.

ಇದರಿಂದಾಗಿ ಮಳೆ ಬರುವ ಸಂದರ್ಭ ನೀರು ಚರಂಡಿಯಲ್ಲಿ ಹರಿದು ಹೋಗಲು ಸಾಧ್ಯವಾಗದೆ ಮುಖ್ಯ ರಸ್ತೆ ತುಂಬಾ ನೀರು ಬರುತ್ತಿದ್ದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟು ಮಾಡುತ್ತಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನ ಗಮನಕ್ಕೆ ನೀಡಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ದೂರಿಕೊಳ್ಳುತಿದ್ದು
ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರ ಅಗ್ರಹವಾಗಿದೆ.