ಅಗ್ರಹಾರ ಬಳಿ ಕುಮಾರಧಾರ ನದಿಗೆ ಹಾರಿರುವ ಶಂಕೆ
ಎಸ್.ಡಿ.ಆರ್. ಎಫ್ ನಿಂದ ಶೋಧ


ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಯೋಗಿ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ
ಜು.22 ರಂದು ನಾಪತ್ತೆ ಆಗಿದ್ದು ಅಗ್ರಹಾರ ಬಳಿ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಪತ್ತೆಗಾಗಿ ಇಂದು ಎಸ್ ಡಿ..ಆರ್.ಎಫ್ ನಿಂದ ನದಿಯಲ್ಲಿ ಶೋಧ ಆರಂಭಗೊಂಡಿದೆ.
















ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಬ್ಯಲೆನ್ಸ್ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ಅವರು ಜು.22 ರಂದು ಕರ್ತವ್ಯಕ್ಕೆಂದು ಮನೆಯಿಂದ ಬೆಳಗ್ಗೆ 09.00 ಗಂಟೆಗೆ ಹೋಗಿದ್ದು, ಬಳಿಕ ಕಾಣೆಯಾಗಿದ್ದಾರೆ. ಅಲ್ಲದೆ ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿ ಕಡೆ ಹೋಗಿರುವುದು ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದ್ದು ನದಿಗೆ ಹಾರಿರುವುದು ಖಚಿತ ಎಂದೆನ್ನಲಾಗುತ್ತಿದೆ. ಇಂದು ಈಜು ಪಟು ಈಶ್ವರ ಮಲ್ಪೆ ಕೂಡ ಸುಬ್ರಹ್ಮಣ್ಯ ಶೋಧಕ್ಕಾಗಿ ಬರಲಿದ್ದಾರೆ ಎಂದು ತಿಳಿದು ಬಂದಿದೆ.











