ಸುಳ್ಯ: ರೋಟರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ಹೋಬಳಿ ಘಟಕದಿಂದ ಕಿಟ್ ವಿತರಣಾ ಸಮಾರಂಭ

0

ಜುಲೈ 22 ರಂದು ರೋಟರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ ಘಟಕದಿಂದ ಕಿಟ್ ವಿತರಣಾ ಸಮಾರಂಭವು ಜು. 22 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ,ಸುಳ್ಯ ರೋಟರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ರೊ. ಡಾl ರಾಮಮೋಹನ್ ಸರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ,ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಮಾರಸ್ವಾಮಿ ತೆಕ್ಕುಂಜ, ಸಾಹಿತಿಗಳು, ಗೌರವ ಸಲಹೆಗಾರರು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ ಘಟಕ, ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್, ಸುಳ್ಯ ಹೋಬಳಿ ಘಟಕ, ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ಶಿಕ್ಷಕಿ ಶ್ರೀಮತಿ ಚಂದ್ರಕಲಾ.ಡಿ ಹಾಗೂ ಹಿರಿಯ ಶಿಕ್ಷಕರಾದ ಶ್ರೀಯುತ ಶ್ರೀಹರಿ ಪೈಂದೋಡಿ , ಶ್ರೀಮತಿ ಜಯಶ್ರೀ.ಕೆ , ವಿದ್ಯಾಸಂಸ್ಥೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಕು.ರಕ್ಷಾ ಕಾರ್ಯದರ್ಶಿ ನಮನ್ ರಾಜ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

8ನೇ ತರಗತಿಯ ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರು ಸಮೂಹ ಗಾಯನವನ್ನು ಪ್ರಸ್ತುತಪಡಿಸಿದರು.

ಸಹಶಿಕ್ಷಕಿ ಕುಮಾರಿ ರಮ್ಯಾ ಅಡ್ಕಾರ್, ವಿದ್ಯಾರ್ಥಿಗಳಾದ ಕುಮಾರಿ ರಕ್ಷಾ ಕೆ ಹಾಗೂ ಅಹನ್ ಕಿರಣ್ ಸ್ವರಚಿತ ಕವನ ವಚನ ಮಾಡಿದರು.
ಕುಮಾರಿ ಆಯಿಷತ್ ಆದಿಲ ಕನ್ನಡ ಮತ್ತು ಸಾಹಿತ್ಯದ ಬಗ್ಗೆ ಮಾತನಾಡಿದರು.

ನಂತರ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ ಘಟಕದ ವತಿಯಿಂದ ಕಿಟ್ ಹಸ್ತಾಂತರಿಸಿದರು.

ವಿದ್ಯಾರ್ಥಿನಿಯರಾದ ಕು. ವಂದಿತ, ಗಾನವಿ ,ನಿರೀಕ್ಷಾ ಹಾಗೂ ಪೂರ್ವಿಕ ಪ್ರಾರ್ಥಿಸಿದರು . 10ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ ಬೇರಿಕೆ ಸ್ವಾಗತಿಸಿದರು . ಕುಮಾರಿ ಹಂಸಿಕ ವಂದಿಸಿದರು. ವಿದ್ಯಾರ್ಥಿನಿಯರಾದ ವಂದಿತ ಹಾಗೂ ಅನುಷ್ಕಾ ಕಾರ್ಯಕ್ರಮ ನಿರೂಪಿಸಿದರು.