ಅರಂತೋಡು ಪಂಚಾಯತ್ ವ್ಯಾಪ್ತಿಯ ಎರುಕಡ್ಪು ಸೇತುವೆ ಸಂಪರ್ಕ ರಸ್ತೆ ವಿವಾದ ಸುಖಾಂತ್ಯ

0

ಪಂಚಾಯತ್ ಅಧ್ಯಕ್ಷರು , ಸುಳ್ಯ ಕಂದಾಯ ನಿರೀಕ್ಷಕರು, ಮತ್ತು ಕಂದಾಯ ಅಧಿಕಾರಿಗಳು, ಜನಪ್ರತಿನಿಧಿಗಳ ಉಪಸ್ಥಿತಿ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡುಪಂಜ, ಏರುಕಡ್ಪು,ಕಲ್ಲು ಗುಂಡಿ ಸಂಪರ್ಕ ರಸ್ತೆ ಯ ಏರುಕಡ್ಪು ಸೇತುವೆಯ ಒಂದು ಬದಿಯ ಜಾಗದ ತಕರಾರಿನಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಎರುಕಡ್ಪುನಲ್ಲಿ ಎರಡು ವರ್ಷದ ಹಿಂದೆ ವ್ಯವಸ್ಥಿತವಾಗಿ ನಿರ್ಮಾಣಗೊಂಡ ಕಿಂಡಿ ಆಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಂಡಿತ್ತು ಆದರೂ ಸೇತುವೆಯ ಒಂದು ಬದಿಯ ಜಾಗದ ತಕರಾರಿ ನಿಂದ ವ್ಯವಸ್ಥಿತ ಸಂಪರ್ಕ ರಸ್ತೆ ಇರದೆ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು ಇದರಿಂದ ಕಾಡುಪಂಜ ಮತ್ತು ಊರುಪಂಜದ ಗ್ರಾಮಸ್ಥರು, ಅರಂತೋಡು ಪಂಚಾಯತ್ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದ್ದರು.

ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಜು. ೨೩ರಂದು ಸುಳ್ಯ ಕಂದಾಯ ನಿರೀಕ್ಷಕರಾದ ಅವಿನ್ ರಂಗತ್‌ಮಲೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರಾದ ರವಿಚಂದ್ರ, ಭೂಮಾಪನ ಇಲಾಖೆಯ ಅಧಿಕಾರಿಗಳು, ಅರಂತೋಡು ಗ್ರಾಮ ಆಡಳಿತ ಅಧಿಕಾರಿ ಶರತ್ ಕುಮಾರ್, ಸಂಪಾಜೆ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಹಾಗೂ ಸುಳ್ಯ ಆರಕ್ಷಕ ಠಾಣೆಯ ಸಿಬ್ಬಂದಿಗಳೊಂದಿಗೆ ಆಗಮಿಸಿ ಜಾಗದ ಮಾಲಕರಾದ ಶ್ರೀಮತಿ ಪಾರ್ವತಿ ಮತ್ತು ಮಕ್ಕಳು ಬೆಳ್ಳಿಪಾಡಿಯವರೊಂದಿಗೆ ಮಾತನಾಡಿ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ, ತಾತ್ಕಾಲಿಕವಾಗಿ ಜೆ. ಸಿ. ಬಿ. ಮೂಲಕ ಸಂಪರ್ಕರಸ್ತೆ ನಿರ್ಮಿಸಲಾಯಿತು.


ಈ ಸಂದರ್ಭದಲ್ಲಿ ಅರಂತೋಡು ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಅರಂತೋಡು ಗ್ರಾಮ ಸಹಾಯಕ ಭರತ್ ಬಾಳಕಜೆ, ಸೋಮನಾಥ್, ಸರ್ವೆ ಇಲಾಖೆಯ ಜಗದೀಶ್, ರಕ್ಷಿತ್ ಮತ್ತು ಹಿರಿಯ ಸಾಮಾಜಿಕ ಹೋರಾಟಗಾರ ಸೀತಾರಾಮ ಕಾಡುಪಂಜ, ಜಗದೀಶ್ ಕಾಡುಪಂಜ, ಚಿದಾನಂದ ಕಾಡುಪಂಜ, ಪ್ರಭಾಕರ ಕಾಡುಪಂಜ, ವಸಂತ ಕಾಡುಪಂಜ, ಬೊಳಿಯಪ್ಪ ಕಾಡು ಪಂಜ, ರಾಧಾಕೃಷ್ಣ ಕಾಡುಪಂಜ, ಲಕ್ಷ್ಮೀಶ ಊರುಪಂಜ ಮತ್ತು ಗುರುಪ್ರಸಾದ್ ಬೆಳ್ಳಿಪಾಡಿ ಉಪಸ್ಥಿತರಿದ್ದರು.