ಸರಿಯಾಗಿ ಶಿಕ್ಷಕರ ಕೊಡದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನ್ಯಾಯ

0

ಕಳಂಜ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಕ್ರೋಶ

ಕಳಂಜ ಗ್ರಾ.ಪಂ ನ ಗ್ರಾಮ ಸಭೆ ಇಂದು ದೀನ್ ದಯಾಳ್ ಸಂಭಾಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕಳಂಜ ಗ್ರಾ.ಪಂ ನ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಶ್ರೀಮತಿ ಶೀತಲ್ ಇದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಲತಾ, ಸದಸ್ಯರುಗಳಾದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಗಣೇಶ್ ರೈ ಶ್ರೀಮತಿ ಕಮಲ, ಶ್ರೀಮತಿ ಸುಧಾ, ಪಿಡಿಒ ಶ್ರೀಮತಿ ಗೀತಾ, ಕಾರ್ಯದರ್ಶಿ ಪದ್ಮಯ್ಯ ಉಪಸ್ಥಿತರಿದ್ದರು. ಪಿಡಿಒ ಶ್ರೀಮತಿ ಗೀತಾ ಸ್ವಾಗತಿಸಿ, ವಂದಿಸಿದರು.

ಗ್ತಾಮ ಸಭೆಯಲ್ಲಿ ಸರ್ಕಾರಿ ಶಾಲೆಗೆ ಬೇಕಾದಷ್ಟು ಶಿಕ್ಷಕರ ಕೊಡದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನ್ಯಾಯ ಮಾಡುತಿದ್ದಾರೆ ಎಂದು ಅಕ್ರೋಶ ವ್ಯಕ್ತವಾಯಿತು. ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆ ಕೊಟ್ಟು, ಮೊಟ್ಟೆ ತಿನ್ನದ ಮಕ್ಕಳಿಗೆ ಬರೆ ಬಾಳೆ ಹಣ್ಣು ನೀಡಿ ಸರ್ಕಾರದಿಂದ ಅನ್ಯಾಯ ಅಗುತ್ತಿದೆ ಎಂದು ಅಕ್ರೋಶ ವ್ಯಕ್ತವಾಯಿತು. ಇದಲ್ಲದೆ ಸೋಲಾರ್ ಲೈಟು, ರಸ್ತೆ ಅವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.