ಅಲೆಟ್ಟಿ ರಸ್ತೆಯಲ್ಲಿರುವ ಮಾರ್ಗಸೂಚಿ ನಾಮಫಲಕಗಳನ್ನು ಸ್ವಚ್ಛ ಮಾಡುವ ಮೂಲಕ ಸ್ಥಳೀಯ ಯುವಕರು ಸಮಾಜ ಸೇವಾ ಕಾರ್ಯವನ್ನು ಮಾಡಿದರು.















ನಾಗಪಟ್ಟಣ ಬಳಿಯಿಂದ ನಾರ್ಕೊಡು ತನಕ ಮುಖ್ಯ ರಸ್ತೆಯ ಬದಿಯಲ್ಲಿ ಅಳವಡಿಸಿರುವ ರಸ್ತೆ ಮಾರ್ಗಸೂಚಿ ಫಲಕಗಳು ಕಾಡು ಪೊದೆ ಗಳಿಂದ ಕೂಡಿದ್ದು ಮಳೆ ನೀರು ಬಿದ್ದು ಪಾಚಿ ಹಿಡಿದು ಸರಿಯಾಗಿ ವಾಹನ ಸವಾರರಿಗೆ ಕಂಡು ಕೊಂಡಿರಲಿಲ್ಲ. ಇದನ್ನು ಮನಗಂಡ ಆಟೋ ಚಾಲಕ ರೋಹಿತಾಶ್ವ ಕುಂಚಡ್ಕ, ಜೀವಿತ್, ರೋಹಿತ್ ಯಾದವ್ ಕುಡೆಕಲ್ಲು,ಚಿದಾನಂದ ನಾರ್ಕೋಡು ರವರು ಕಾಡು ಕಡಿದು ನೀರಿನಿಂದ ಫಲಕ ಗಳನ್ನು ತೊಳೆದು ಸ್ವಚ್ಛತಾ ಕಾರ್ಯ ಮಾಡಿದರು. ಇವರ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.



