ಪಂಜ: ವನಿತಾ ಸಮಾಜ ವತಿಯಿಂದ ಆಟಿ ಸಂಭ್ರಮ- 2025

0

ಪಂಜ ವನಿತಾ ಸಮಾಜ(ರಿ.) ವತಿಯಿಂದ ಆಟಿ ಸಂಭ್ರಮ ಜು.23 ರಂದು ಜರುಗಿತು.
ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ಸೀತಾ ಗಂಗಾಧರ ಗುಂಡಡ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು. ವನಿತಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ , ಕಾರ್ಯದರ್ಶಿ ಶ್ರೀಮತಿ ಸ್ವರ್ಣ ರೋಹಿತ್, ಖಜಾಂಜಿ ಶ್ರೀಮತಿ ಭವ್ಯ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಾಜದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಸಮಾಜದ ಕಾರ್ಯದರ್ಶಿ ಶ್ರೀಮತಿ ಸ್ವರ್ಣ ರೋಹಿತ್ ವಂದಿಸಿದರು. ಮದ್ಯಾಹ್ನ ಎಲ್ಲಾ ಸದಸ್ಯೆಯರು ಮನೆಯಲ್ಲಿಯೇ ತಯಾರಿಸಿ ತಂದ ಆಹಾರ ಪದಾರ್ಥಗಳ ಭೂರಿ ಭೋಜನವನ್ನು ಎಲ್ಲರೂ ಬಾಳೆ ಎಲೆಯಲ್ಲಿ ಸೇವಿಸಿದರು. ಸುಮಾರು 36 ವಿವಿಧ ಬಗೆಯ ವಿಶೇಷವಾಗಿ ಆಟಿಯ ತಿಂಗಳಲ್ಲಿ ಸೇವಿಸಲು ಯೋಗ್ಯವಾದ ಪದಾರ್ಥಗಳು ವಿಶೇಷವಾಗಿ ಕಂಡುಬಂತು.