ನ್ಯಾಷನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (NATA-2025) ಕೆಸಿಇಟಿ (ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಶಿಶಿರ್ ಎಂ.ಬಿ ಯವರು ರಾಜ್ಯಕ್ಕೆ 12ನೇ ರ್‍ಯಾಂಕ್ ಪಡೆದಿದ್ದಾರೆ.















ಗುರುವಾಯನಕೆರೆಯ ಎಕ್ಸೆಲ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದಿರುವ ಇವರು ಎಲ್.ಕೆ.ಜಿಯಿಂದ 1 ನೇ ತರಗತಿಯ ತನಕ ಬ್ಲೆಸ್ಡ್ ಕುರಿಯಕೋಸ್, 2ರಿಂದ 7ನೇ ತರಗತಿಯ ತನಕ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಮತ್ತು 8ರಿಂದ 10ನೇ ತರಗತಿಯ ತನಕ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ.
ಇವರು ಗುತ್ತಿಗಾರು ಗ್ರಾಮದ ಮುತ್ಲಾಜೆ ಭುವನೇಶ್ ಮತ್ತು ಶ್ರೀಮತಿ ಸಂಧ್ಯಾ ಎಂ.ಬಿ ದಂಪತಿಯ ಪುತ್ರ ಹಾಗೂ ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ನಿವೃತ್ತ ಕಾರ್ಯದರ್ಶಿ ಮುತ್ಲಾಜೆ ಕೃಷ್ಣಪ್ಪ ಗೌಡರ ಮೊಮ್ಮಗರಾಗಿರುವ ಇವರು JEE (B.Arch) AIR ನಲ್ಲಿ 1113 ಕೆಸಿಇಟಿ ಯಲ್ಲಿ ಮುತ್ಲಾಜೆಯ ಶಿಶಿರ್ ಎಂ.ಬಿ. ರಾಜ್ಯ ಮಟ್ಟದಲ್ಲಿ 12ನೇ ರ್‍ಯಾಂಕ್ ಪಡೆದು ರಾಜ್ಯ ಮತ್ತು ರಾಷ್ಟ್ರದ B.Arch ಕಾಲೇಜಿಗೆ ಅರ್ಹತೆಯನ್ನು ಪಡೆದಿದ್ದಾರೆ.










