ಜು.30 ರಂದು ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ

0

ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆ ಬಗ್ಗೆ ಪ್ರಸ್ತಾಪಕ್ಕೆ ವಿರೋಧ

ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಐನೆಕಿದು – ಸುಬ್ರಹ್ಮಣ್ಯ ಸೊಸೈಟಿ ಬಳಿ ರೈತರ ಸಂರಕ್ಷಣೆ ಬಗ್ಗೆ ಜು. 30 ರಂದು 11 ಗಂಟೆಗೆ ಸಭೆ ನಡೆಯಲಿದೆ.

ಸಭೆಯಲ್ಲಿ ಪ್ರಮುಖವಾಗಿ ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆ ಬಗ್ಗೆ ಪ್ರಸ್ತಾಪ ನಡೆದಿರುವುದಾಗಿ ತಿಳಿದು ಬಂದಿದೆ. ಇದೇನಾದರು ಆದರೆ ಆಸು ಪಾಸಿನ ಗ್ರಾಮದ ರೈತರ ಭೂಮಿ ಕಳೆದುಕೊಳ್ಳುವ ಭೀತಿಯಿದೆ. ಇದಾದರೆ ರೈತರಿಗೆ ಆಗುವ ತೊಂದರೆಯ ಬಗ್ಗೆ , ಅರಣ್ಯ ಇಲಾಖೆಯ ಕಾನೂನಿಂದ ಆಗುವ ಮಾನಸಿಕ ಹಿಂಸೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ರೈತರ ಸಂರಕ್ಷಣೆ ಕಾಡು ಪ್ರಾಣಿಗಳ ದಾಳಿಯಿಂದ ರೈತರ ಜೀವ ಅನಿ ಆಗುವುದು, ರೈತರ ಕೃಷಿ ರಕ್ಷಣೆ, ಫ್ಲೋಟಿಂಗ್ ಆಗದ ಜಾಗವನ್ನು ಫ್ಲೋಟಿಂಗ್ ಮಾಡುವುದರ ಬಗ್ಗೆ, ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವ ವಿಚಾರ, ನಿಷೇಧದ ಬಗ್ಗೆ ರೈತ ಹಿತರಕ್ಷಣಾ ವೇದಿಕೆ ರೈತರ ಪರವಾಗಿ ಉಗ್ರವಾಗಿ ಹೋರಾಟ ಮಾಡಲು ಉದ್ಧೆಶಿಸಿದ್ದು ಸಭೆಯಲ್ಲಿ ವಿವಿಧ ಧಾರ್ಮಿಕ ಪ್ರಮುಖರು, ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು. ಜನಪ್ರತಿನಿಧಿಗಳು, ಊರಿನ ಗಣ್ಯರು , ಗ್ರಾಮೀಣ ಪ್ರದೇಶದ ಜನರು ಬಂದು ಸಲಹೆ ಸೂಚನೆ ನೀಡಬೇಕೆಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ
ಕಿಶೋರ್ ಶಿರಾಡಿ ಕೇಳಿಕೊಂಡಿದ್ದಾರೆ.