ಕಲ್ಮಕಾರು : ಸರ್ವೋದಯ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಪುನೀತ್ ಕುಮಾರ್ ಕೊಪ್ಪಡ್ಕ,ಪವನ್ ಗುಡ್ಡನಮನೆ ಪ್ರದಾನ ಕಾರ್ಯದರ್ಶಿ, ಕುಶಾಲಪ್ಪ ಮೆದುಮನೆ ಖಜಾಂಜಿ

ಸರ್ವೋದಯ ಯುವಕ ಮಂಡಲ ಕಲ್ಮಕಾರು ಇದರ ಪದಾಧಿಕಾರಿಗಳ ಆಯ್ಜೆ ಜು.20 ರಂದು ಕಲ್ಮಕಾರು ಬಯಲು ರಂಗ ಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಡ್ಯಾನಿ ಯಾಲದಾಳು ಅವರು ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಪುನೀತ್ ಕುಮಾರ್ ಕೊಪ್ಪಡ್ಕ ಆಯ್ಕೆಯಾಗಿದ್ದಾರೆ.
ಪವನ್ ಗುಡ್ಡನಮನೆ ಪ್ರದಾನ ಕಾರ್ಯದರ್ಶಿಯಾಗಿ, ಕುಶಾಲಪ್ಪ ಮೆದುಮನೆ ಖಜಾಂಜಿ ಆಯ್ಕೆಯಾದರು.
ಗುರುಪ್ರಸಾದ್ ನೀಡುಬೆ ಮತ್ತು
ಧವನ್ ಕೊಪ್ಪಡ್ಕ -ಉಪಾಧ್ಯಕ್ಷರಾಗಿ,
ಮೋಕ್ಷಿತ್ ಕಾಗೋಡು -ಜೊತೆ ಕಾರ್ಯದರ್ಶಿಯಾಗಿ,
ದೀಕ್ಷಿತ್ ದಬ್ಬಡ್ಕ ಕ್ರೀಡಾ ಕಾರ್ಯದರ್ಶಿಯಾಗಿ,
ವಿನೋದ್ ಮಣಿಯಾನ ಮನೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ
ಆಯ್ಕೆಯಾದರು.
ಡ್ಯಾನಿ ಯಾಲದಾಳು ಗೌರವಧ್ಯಕ್ಷರಾಗಿ, ಗೌರವ ಸಲಹೆಗರಾರಾಗಿ ವೆಂಕಟ್ರಮಣ ಕೊಪ್ಪಡ್ಕ, ಸೋಮಶೇಖರ್ ಬಿಳಿಮಲೆ, ಬೆಳ್ಯಪ್ಪ ಮಣಿಯಾನ ಮನೆ, ಶೇಷಪ್ಪ ಕೊಪ್ಪಡ್ಕ , ಭರತ್ ದೇವಜನ, ನಂದ ಬಿಳಿಮಲೆ, ಧನಂಜಯ ಕಾರ್ಗೋಡು ಇವರನ್ನು ಆಯ್ಕೆಮಾಡಲಾಯಿತು.