















ರೈಟ್ ಟು ಲಿವ್ ಕೋಟೆ ಫೌಂಡೇಶನ್ ನ ರೈಟ್ ಟು ಲಿವ್ ಯೋಜನೆಯ ವತಿಯಿಂದ ಸುಳ್ಯದಲ್ಲಿ ಎಂ.ಬಿ.ಫೌಂಡೇಶನ್ ವತಿಯಿಂದ ನಡೆಸಲ್ಪಡುವ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ವ್ಯಾನ್ ಹಸ್ತಾಂತರ ಕಾರ್ಯಕ್ರಮ ಜು. 25 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ. ಫೌಂಡೇಶನ್ ನ ಅಧ್ಯಕ್ಷ ಎಂ.ಬಿ .ಸದಾಶಿವ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೈಟು ಟು ಲಿವ್ ಕೋಟೆ ಫೌಂಡೇಶನ್ ನ ಸಂಸ್ಥಾಪಕ ಕೋಟೆ ವಸಂತ ಕುಮಾರ್ ರವರ ಪುತ್ರ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಘುರಾಮ ಕೋಟೆಯವರು ವ್ಯಾನನ್ನು ಎಂ.ಬಿ.ಯವರಿಗೆ ಹಸ್ತಾಂತರಿಸಿದರು.

ರಘುರಾಮ ಕೋಟೆಯವರ ಪತ್ನಿ ಶ್ರೀಮತಿ ಅರ್ಚನಾ ಕೋಟೆ, ಪುತ್ರಿ ಆಧ್ಯ ಕೋಟೆ, ಗಣಪಯ್ಯ ಪೆರುವಾಜೆ ವನಶ್ರೀ, ಶ್ರೀಮತಿ ಶಶಿಕಲಾ ಗಣಪಯ್ಯ, ಕೋಟೆ ಫೌಂಡೇಶನ್ ನ ಸಾಯಿರಂಜನ್ ಕಲ್ಚಾರ್, ಆಪರೇಶನ್ ಮ್ಯಾನೇಜರ್ ವೀರೇಶ್, ಕೋ ಆರ್ಡಿನೇಟರ್ ಪ್ರದೀಪ್ ಉಬರಡ್ಕ, ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ ಮತ್ತು ಶಾಲಾ ಕೋಶಾಧಿಕಾರಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಕೋಟೆ ಫೌಂಡೇಶನ್ ನ ಸಂಸ್ಥಾಪಕ ರಘುರಾಮ ಕೋಟೆಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಯೋಗ ಶಿಕ್ಷಕರೂ ಆಗಿರುವ ಗಣಪಯ್ಯ ಪೆರುವಾಜೆಯವರು ಸಾಂದೀಪ್ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಿಯರಿಗೆ ಪ್ರಾಣಾಯಾಮ ತರಬೇತಿಯನ್ನು ಉಚಿತವಾಗಿ ನೀಡಲು ಸಿದ್ಧ ಎಂದರು. ಮುಖ್ಯಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ ಸನ್ಮಾನಪತ್ರ ವಾಚಿಸಿದರು. ವಿಶೇಷ ಚೇತನ ಮಕ್ಕಳು ಪ್ರಾರ್ಥನೆ ಹಾಡಿದರು.











