ಅಜ್ಜಾವರ : ಕಂಡದ ಗೌಜಿ ಕೆಸರ್ದ ಪರ್ಬ ಕಾರ್ಯಕ್ರಮಕ್ಕೆ ಚಾಲನೆ

0

ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ ಹಾಗೂ
ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ಅಜ್ಜಾವರ ಇವುಗಳ ಸಹಯೋಗದೊಂದಿಗೆ
4ನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಕಾರ್ಯಕ್ರಮ ಅಜ್ಜಾವರ
ಕೊರಂಗುಬೈಲು ಗದ್ದೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ಅಜ್ಜಾವರ ಇದರ ಗೌರವಾಧ್ಯಕ್ಷರಾದ ಲೋಕಯ್ಯ ಅತ್ಯಾಡಿ ಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಮನಮೋಹನ ಮುಡೂರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಹಾಗೂ ಗದ್ದೆಯ ಮಾಲಕರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಕೆ. ಕರುಣಾಕರ ಕೊಡೆoಕಿರಿ, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಪ್ರತಾಪ ಯುವಕ ಮಂಡಲ ಅಧ್ಯಕ್ಷರಾದ ಗುರುರಾಜ್,ಉಪಾಧ್ಯಕ್ಷೆ ಶ್ರೀಮತಿ ಮಾಲತಿ,ಗೌರವ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ ರಾವ್,ಸಾಂಸ್ಕೃತಿಕ ಕಾರ್ಯದರ್ಶಿ ಧನಲಕ್ಷ್ಮೀ ಸಂತೋಷ್, ಕಾರ್ಯದರ್ಶಿ ನವೀನ್ ಕುಮಾರ್, ಜತೆ ಕಾರ್ಯದರ್ಶಿ ಅನಿಲ್ ರಾಜ್, ಕೋಶಾಧಿಕಾರಿ ಲೋಕೇಶ್ ರಾವ್, ವಿನಯ್ ನಾರಾಲು, ವಿನೋದ್ ಮಾವಿನಪಳ್ಳ, ಗೌರೀಶ್, ಅಕ್ಷತ್ ಕುಮಾರ್ ಹಂಚಿನ ಮನೆ , ರವಿ ನಾರಲು, ಪ್ರಭಾಕರ ಉಪಸ್ಥಿತರಿದ್ದರು.