ನಾಟಾದಲ್ಲಿ ಎಕ್ಸಲೆಂಟ್‌ನ ಸೃಜನಾ ಬೊಳುಗಲ್ಲುಗೆ 35ನೇ ರಾಂಕ್

0

ಕೌನ್ಸಿಲ್‌ ಆಫ್ ಆರ್ಕಿಟೆಕ್ಚರ್ ನಡೆಸಿದ ನಾಟಾ ಪರೀಕ್ಷೆಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಸೃಜನಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ 35ನೇ ರಾಂಕ್ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿನಿಯನ್ನು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್, ಬೋಧಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.

ಇವರು ಮಂಡೆಕೋಲು ಗ್ರಾಮದ ಶುಭಕರ ಬೊಳುಗಲ್ಲು ಹಾಗೂ ಸುಳ್ಯದ ಅಂಜಲಿ ಮಾಂಟೇಸರಿ ಸಂಸ್ಥೆಯ ನಿರ್ದೇಶಕಿ ಗೀತಾಂಜಲಿ ಟಿ.ಜಿ ದಂಪತಿಯ ಪುತ್ರಿ.