ಅರಂತೋಡು -ಎಲಿಮಲೆ ರಸ್ತೆಯಲ್ಲಿ ಗಾಳಿ ಮಳೆಗೆ ಬುಡ ಸಹಿತ ಕರೆಂಟ್ ಕಂಬದ ಮೇಲೆ ಬಿದ್ದ ಮರ : ತೆರವು

0

ಅರಂತೋಡು -ಎಲಿಮಲೆ ರಸ್ತೆಯಲ್ಲಿ ಗಾಳಿ ಮಳೆಗೆ ಬುಡ ಸಹಿತ ಕರೆಂಟ್ ಕಂಬದ ಮೇಲೆ ಮರ ಬಿದ್ದು ನಂತರ ತೆರವುಗೊಳಿಸಿದ ಘಟನೆ ವರದಿಯಾಗಿದೆ.

ಅರಂತೋಡು ಗ್ರಾಮ ಪಂಚಾಯತ್, ಅಡ್ತಲೆ ಸ್ಪಂದನ ಗೆಳೆಯರ ಬಳಗ ಮತ್ತು. ನಾಗರೀಕ ಹಿತ ರಕ್ಷಣಾ ವೇದಿಕೆಯ ಸದಸ್ಯರು ಕೂಡಲೇ ಸ್ಪಂದಿಸಿ ಮರ ತೆರವುಗೊಳಿಸುವ ಕಾರ್ಯ ಮಾಡಿದರು.

ಜುಲೈ 25ರ ಸಂಜೆ ಸುರಿದ ಬಾರಿ ಗಾಳಿ ಮಳೆಗೆ ಆರಂತೋಡು-ಎಲಿಮಲೆ ರಸ್ತೆಯ ಕಿರ್ಲಾಯ ಸಮೀಪ 3ಮರಗಳು ಬುಡ ಸಹಿತ ಕರೆಂಟ್ ಕಂಬದ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ವಿಷಯ ತಿಳಿದ ತಕ್ಷಣ ಆರಂತೋಡು ಪಂಚಾಯತ್ ನ ಅಧ್ಯಕ್ಷರು ಅಡ್ತಲೆ ಸ್ಪಂದನ ಗೆಳೆಯರ ಬಳಗ ಮತ್ತು ನಾಗರಿಕ ಹಿತ ರಕ್ಷಣಾ ವೇದಿಕೆಯ ಸದಸ್ಯರ ಗಮನಕ್ಕೆ ತಂದು ಅವರ ಸಹಕಾರ ದಿಂದ ಕೂಡಲೇ ಕಿರ್ಲಾಯ ಮತ್ತು ಕಿನಾಲ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದರು. ಅರಂತೋಡ್ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಸಹಕರಿಸಿದರು.