ಶಾಸಕರು ಹಾಗೂ ವಿವಿಧ ಗಣ್ಯರುಗಳಿಂದ ಜೈ ಜವಾನ್ ಸ್ಮಾರಕ ಕ್ಕೆ ಪುಷ್ಪಾರ್ಚನೆ ಹಾಗೂ ಗೌರವ ವಂದನೆ
ಸುಳ್ಯ ತಾಲೂಕು ನಿವೃತ್ತ ಸೈನಿಕರ ಸಂಘ ಹಾಗೂ ನಗರ ಪಂಚಾಯತ್ ಸುಳ್ಯ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಜುಲೈ 26 ರಂದು ನಗರ ಪಂಚಾಯತ್ ವಠಾರದಲ್ಲಿ ಜೈ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚನೆ ಹಾಗೂ ಗೌರವ ನಮನದೊಂದಿಗೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ರವರು ಈ ಸಂಧರ್ಭದಲ್ಲಿ ಮಾತನಾಡಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯು 1999 ರ ಕಾರ್ಗಿಲ್ ಯುದ್ಧದ ವಿಜಯದ 26 ನೇ ವಾರ್ಷಿಕೋತ್ಸವವನ್ನು ಇಂದು ಸ್ಮರಿಸುತ್ತದೆ.
ಈ ದಿನವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಕಾರ್ಯತಂತ್ರದ ಶಿಖರಗಳನ್ನು ಮರಳಿ ಪಡೆದ ಭಾರತೀಯ ಸೈನಿಕರ ಶೌರ್ಯ, ಮತ್ತು ತ್ಯಾಗವನ್ನು ನೆನಪು ಮಾಡುವ ದಿನವಾಗಿದೆ.
ದೇಶದ ಸೈನಿಕರ ಕೆಚ್ಚೆದೆಯ ಸಾಹಸ ದಿಂದ ಇಂದು ನಾವು ನಮ್ಮ ನಮ್ಮ ಊರುಗಳಲ್ಲಿ ನಿಟ್ಟುಸಿರಿನ ಜೀವನ ಜೀವಿಸಲು ಸಾಧ್ಯವಾಗಿದೆ ಎಂದು ವೀರ ಸೇನಾನಿ ಗಳನ್ನು ನೆನಪಿಸಿ ಕ್ಕೊಂಡರು.

ಸುಳ್ಯ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಯಕರ ಎಂ ಡಿ, ಗೌರವ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ,ಸುಳ್ಯ ನ.ಪಂ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ, ಸುಳ್ಯ ಸುಡಾ ಅಧ್ಯಕ್ಷರಾದ ಕೆ ಎಂ ಮುಸ್ತಫಾ ಜನತಾ ರವರು ಈ ಸಂಧರ್ಭದಲ್ಲಿ ಮಾತನಾಡಿ ‘ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಸಾಹಸ ಹಾಗೂ ಬಲಿದಾನದ ಬಗ್ಗೆ ಮಾತನಾಡಿ ನಮನ ಸಲ್ಲಿಸಿದರು.















ನಿವೃತ್ತ ಸೈನಿಕರ ಸಂಘದ ಸದಸ್ಯರು ಹಾಗೂ ಸುಳ್ಯ ಎನ್ ಎಂ ಸಿ ಕಾಲೇಜು ಎನ್ ಸಿ ಸಿ ಕೇಡಿಡೆಟ್ಗಳಿಂದ ಶಿಸ್ತು ಬದ್ದ ಗೌರವ ವಂದನೆ ನಡೆಯಿತು.
ಬಳಿಕ ಗಣ್ಯರಿಂದ ವೀರ ಸ್ಮಾರಕಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನಡೆಯಿತು.ಈ ಸಂಧರ್ಭ ದಲ್ಲಿ ಸುಳ್ಯ ಪೊಲೀಸ್ ಠಾಣಾ ಎಸ್ ಐ ಸಂತೋಷ್,ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರುಗಳಾದ ವಿನಯ್ ಕುಮಾರ್ ಕಂದಡ್ಕ, ಎಂ ವೆಂಕಪ್ಪ ಗೌಡ, ಹಾಗೂ ನ. ಪಂ ಸದಸ್ಯರುಗಳು,ನಿವೃತ್ತ ಸೇನಾನಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು,ನ ಪಂ ಸಿಬ್ಬಂದಿಗಳು,ಪೌರ ಕಾರ್ಮಿಕರು,ಪೊಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ವಾಗಿ ಹಿರಿಯ ನಿವೃತ್ತ ಸೇನಾನಿ ದೇರಣ್ಣ ಗೌಡರ 85 ನೇ ಹುಟ್ಟುಹಬ್ಬದ ಅಂಗವಾಗಿ ಅವರನ್ನು ಹೂ ಗುಚ್ಛ ನೀಡಿ ಶುಭಹಾರೈಕೆ ನೀಡಲಾಯಿತು.
ಮುಂದಿನ ದಿನಗಳಲ್ಲಿ ಜೈ ಜವಾನ್ ಸ್ಮಾರಕದ ಪರಿಸರದ ಅಭಿವೃದ್ಧಿ ಗೆ 50 ಸಾವಿರ ರೂಪಾಯಿ ನೀಡುವ ಬಗ್ಗೆ ಅವರು ನ ಪಂ ಅಧ್ಯಕ್ಷರಿಗೆ ಭರವಸೆಯನ್ನು ನೀಡಿದರು.
ಬಳಿಕ ನಿವೃತ್ತ ಸೇನಾನಿಗಳ ಸಂಘದ ಸಭಾ ಭವನ ನಿರ್ಮಾಣಕ್ಕೆ ಸುಳ್ಯದಲ್ಲಿ 10 ಸೆಂಟ್ ಜಾಗ ಕೊಡಿಸುವ ಬಗ್ಗೆ ಶಾಸಕರಲ್ಲಿ ಸಂಘದ ವತಿಯಿಂದ ಬೇಡಿಕೆಯ ರೂಪದಲ್ಲಿ ಮನವಿ ಮಾಡಿದರು.

ಸದಸ್ಯರಾದ ಎಂ ವೆಂಕಪ್ಪ ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ಗುರು ಪ್ರಸಾದ್ ಪಿ ಜಿ ವಂದಿಸಿದರು.










