ಕಣ್ಕಲ್ ಮನೆತನದ ಯಜಮಾನ ಕುಂಞಪ್ಪ‌ ಗೌಡ ಕಣ್ಕಲ್ ನಿಧನ

0

ಕೇನ್ಯ ಗ್ರಾಮದ‌ ಕಣ್ಕಲ್‌ ನಿವಾಸಿ, ಕಣ್ಕಲ್ ‌ಮನೆತನದ ಯಜಮಾನರಾದ ಕುಂಞಪ್ಪ ಗೌಡರು ವಯೋಸಹಜ ಕಾಯಿಲೆಯಿಂದ ಜು.21ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಪ್ರಗತಿಪರ ಕೃಷಿಕರಾಗಿದ್ದ ಕುಂಞಪ್ಪ‌ ಗೌಡರು ಕಣ್ಕಲ್‌ ಆದಿಮನೆಯ‌ ಮುಖ್ಯಸ್ಥರಾಗಿದ್ದು, ತನ್ನ 16 ನೇ ವಯಸ್ಸಿನಿಂದಲೇ ಕುಟಬದ ದೈವ – ದೇವರ ಸೇವೆ ಮಾಡುತ್ತಿದ್ದರು. ಕುಟುಂಬದ ಯಜಮಾನರಾಗಿ ಮಾರ್ಗದರ್ಶನ ‌ನೀಡುತ್ತಿದ್ದರು.

ಮೃತರು ಪತ್ನಿ ಶ್ರೀಮತಿ ಚಿನ್ನಮ್ಮ, ಪುತ್ರರಾದ ಮಾಧವ ಕಣ್ಕಲ್, ಶೇಖರ‌ ಕಣ್ಕಲ್, ಪುತ್ರಿಯರಾದ ಶ್ರೀಮತಿ ತೇಜಾವತಿ, ಶ್ರೀಮತಿ ಪ್ರೇಮಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.