ಸುಳ್ಯದ ರಾಹುಲ್ ಜಿ.ದಾಸ್ ತರಬೇತು ನೀಡಿದ ಕ್ರೀಡಾಪಟುಗಳಿಗೆ ರಾಜ್ಯಮಟ್ಟದ 11 ಪದಕ

0

ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ರಾಹುಲ್ ಜಿ ದಾಸ್ ಮತ್ತು ಮುಖ್ಯ ಕೋಚ್ ಜಗದೀಶ್ ಯಾದವ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಆಟಗಾರರು ಕಳೆದ ವಾರ ಮೈಸೂರಿನಲ್ಲಿ ನಡೆದ 15 ಮತ್ತು 17 ವರ್ಷದೊಳಗಿನವರ ರಾಜ್ಯ ಮಟ್ಟದ ಶ್ರೇಯಾಂಕದಲ್ಲಿ 6 ಚಿನ್ನ, 2 ಬೆಳ್ಳಿ 3 ಕಂಚಿನ ಪದಕವನ್ನು ಗೆದ್ದಿದ್ದಾರೆ.

ರಾಹುಲ್ ಜಿ ದಾಸ್ ಈಗ YPBA ಜೇಶ್ಮಾ ಬ್ಯಾಡ್ಮಿಂಟನ್ ಅಕಾಡೆಮಿ ಉಡುಪಿಯಲ್ಲಿ ತರಬೇತಿಯನ್ನು ಮುನ್ನಡೆಸುತ್ತಿದ್ದಾರೆ, ಬ್ಯಾಡ್ಮಿಂಟನ್ ಮುಂದುವರಿಸುವಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ.

ರಾಹುಲ್ ಜಿ ದಾಸ್ ಸೈಂಟ್ ಜೋಸೆಫ್ ಸುಳ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನಂತರ ಪಿಯು ಶಿಕ್ಷಣವನ್ನುಅಂಬಿಕಾ ವಿದ್ಯಾಲಯ ಪುತ್ತೂರು ಮತ್ತು ಎಸ್‌ಡಿಎಂ ಉಜಿರೆಯಿಂದ ಪದವಿ ಪಡೆದರು ಮತ್ತು 2016 ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬೆಂಗಳೂರಿಗೆ ತೆರಳಿದರು.
ಸುಳ್ಯದಲ್ಲಿ ವೀರಪ್ಪ, ರಿಜ್ವಾನ್ ಜನತಾ ಮತ್ತು ಅಕ್ಷಯ್ ಕೆ.ವಿ.ಜಿ ಅವರಿಂದ ಚಿಕ್ಕ ವಯಸ್ಸಿನಲ್ಲಿ ಬ್ಯಾಡ್ಮಿಂಟನ್‌ಗೆ ಮಾರ್ಗದರ್ಶನ ಪಡೆದರು.
ಅವರು BWF ಅಂತರಾಷ್ಟ್ರೀಯ ಸರ್ಟಿಫೈಡ್ ಕೋಚ್ ಆಗಿದ್ದಾರೆ.

ರಾಹುಲ್ ರವರು ಎಮ್ಮೆನ್ಸ್ ಟೆಕ್ಸ್ ಟೈಲ್ಸ್ ಮತ್ತು ಟೈಲರ್ಸ್ ನ ಎ.ಗೋಕುಲದಾಸ್ ಮತ್ತು ಸುಳ್ಯ ತಾಲೂಕು ಪಂಚಾಯತ್ ಅಧಿಕಾರಿ ಶ್ರೀಮತಿ ರಾಜಲಕ್ಷ್ಮಿ ಯವರ ಪುತ್ರ.