ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

0

ಶ್ರಮದಾನದಲ್ಲಿ ಭಾಗವಹಿಸಿದ ವಿವಿಧ ಸಂಘಟನೆಯ ಸದಸ್ಯರುಗಳು

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಪರಿಸರದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಜುಲೈ ೨೭ರಂದು ಚಾಲನೆ ನೀಡಲಾಯಿತು.


ಶಾಲಾ ಪರಿಸರದ ಕಾಡು ಬಳ್ಳಿಗಳ ತೆರವು ಕಾರ್ಯಕ್ರಮ ಶ್ರಮದಾನ ಮೂಲಕ ನಡೆಯಲಿದ್ದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್‌ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿಯವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರಮದಾನದಲ್ಲಿ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಹಸೈನಾರ್ ಜಯನಗರ, ಶ್ರಮದಾನ ಸಮಿತಿಯ ಸಂಚಾಲಕ ರಾಜೇಶ್ ಉಬರಡ್ಕ, ಎಸ್ ಡಿಎಂಸಿ ಸದಸ್ಯರಾದ ರಮೇಶ್ ಕೊಡಂಕೇರಿ ಹಾಗೂ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ ಮತ್ತು ಯುವಕ ಮಂಡಲ ರಿ. ಉಬರಡ್ಕ ಮಿತ್ತೂರು, ವಿನಾಯಕ ಮಿತ್ರ ಬಳಗ ಅಮೈ ಮಡಿಯಾರ್, ಜೀವನ ಜ್ಯೋತಿ ಟ್ರಸ್ಟ್ ಉಬರಡ್ಕ ಸಂಘಟನೆಯ ಸದಸ್ಯರುಗಳು ಭಾಗವಹಿಸಿದರು.

ಈ ಶ್ರಮದಾನ ಕಾರ್ಯಕ್ರಮ ಪ್ರತಿ ಭಾನುವಾರ ನಡೆಯಲಿದ್ದು, ಶ್ರಮದಾನದಲ್ಲಿ ಭಾಗವಹಿಸಲು ಇಚ್ಛೆಸುವ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಯ ಅಭಿಮಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಕೇಳಿಕೊಂಡರು.