ಇಂದು ಅಪರಾಹ್ನ 2 ಗಂಟೆಯ ಬಳಿಕ ವಿದ್ಯುತ್ ಆಗಮನದ ನಿರೀಕ್ಷೆ
ನಿನ್ನೆಯಿಂದ ಕಾಣೆಯಾಗಿರುವ ವಿದ್ಯುತ್ ಇಂದು ಮಧ್ಯಾಹ್ನ ಎರಡು ಗಂಟೆಯ ವೇಳೆಯ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.















ಭಾರೀ ಮಳೆ ಗಾಳಿಯ ಕಾರಣದಿಂದ ವಿದ್ಯುತ್ ಲೈನಿನ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ಶುಕ್ರವಾರದಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಶನಿವಾರ ಮತ್ತೆ ಅಮ್ಚಿನಡ್ಕದಲ್ಲಿ ಮರಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ಮೈನ್ ಲೈನ್ ಕಡಿತಗೊಂಡು ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬೆಳ್ಳಾರೆ ಸಬ್ ಸ್ಟೇಷನ್ ಗೆ ಪುತ್ತೂರಿನಿಂದ ವಿದ್ಯುತ್ ಬರುವ ಲೈನಿನ ಮೇಲೆ ಕೂಡ ಮರಬಿದ್ದು ಅಲ್ಲಿ ಕೂಡ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಹೀಗೆ ಸುಳ್ಯ ಉಪವಿಭಾಗದ ೧೯ ಗ್ರಾಮಗಳ ವ್ಯಾಪ್ತಿಯಲ್ಲೂ ನಿನ್ನೆ ಅಪರಾಹ್ನದಿಂದ ವಿದ್ಯುತ್ ಇಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಮನೆಗಳಲ್ಲಿರುವ ಇನ್ವರ್ಟರ್ ಗಳಲ್ಲಿ ಕೂಡ ಚಾರ್ಜ್ ಖಾಲಿಯಾಗಿ ಕತ್ತಲೆಯಲ್ಲಿ ಇರುವಂತಾಯಿತು. ಎರಡು ದಿನಗಳಲ್ಲಿ ಸುಮಾರು ೧೨೦ ಕಂಬಗಳು ಮುರಿದುಬಿದ್ದಿವೆ.
ಮೆಸ್ಕಾಂ ಇಲಾಖಾ ಸಿಬ್ಬಂದಿ ನಿನ್ನೆಯಿಂದಲೇ ದುರಸ್ತಿ ಕಾರ್ಯದಲ್ಲಿ ಸಮರೋಪಾದಿಯಲ್ಲಿ ತೊಡಗಿಕೊಂಡಿದ್ದಾರೆ. ಇಂದು ಅಪರಾಹ್ನ ೨ ಗಂಟೆಯ ವೇಳೆಗೆ ಮೈನ್ ಲೈನ್ ದುರಸ್ತಿ ಕಾರ್ಯ ಪೂರ್ಣಗೊಂಡು ವಿದ್ಯುತ್ ಸರಬರಾಜು ಆರಂಭಗೊಳ್ಳಲಿದೆ ಎಂದು ಮೆಸ್ಕಾಂ ಅಧಿಕಾರಿ ಸುಪ್ರೀತ್ ಕುಮಾರ್ ತಿಳಿಸಿದ್ದಾರೆ.










