ಸ್ನೇಹ ಸಿಲ್ಕ್ಸ್ – ರೆಡಿಮೇಡ್ಸ್‌ನಲ್ಲಿ ಆಟಿ, ಮಾನ್ಸೂನ್ `ಡಿಸ್ಕೌಂಟ್ ಸೇಲ್’

0

ಪುತ್ತೂರು: ಬಟ್ಟೆ ಖರೀದಿಸಬೇಕೆಂದು ಯೋಚಿಸುತ್ತಿದ್ದರೆ ಪುತ್ತೂರಿನ ಬೊಳುವಾರಿನಲ್ಲಿರುವ ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್‌ಗೆ ಭೇಟಿ ನೀಡಿ. ಆಟಿ ಮಾನ್ಸೂನ್ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು, ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರೈಟಿ ವಿನ್ಯಾಸದ ಉಡುಪುಗಳು ಅತೀ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.


ಹೊಸ ಜವುಳಿಗಳ ಸಂಗ್ರಹಗಳಲ್ಲಿ ಟೀ ಶರ್ಟ್‌ಗಳ ಬೆಲೆ ೧೦೦ ರೂಪಾಯಿಯಿಂದ ಪ್ರಾರಂಭಗೊಂಡರೆ ಶರ್ಟ್ ಬೆಲೆ ೧೯೫ ರೂ., ಪ್ಯಾಂಟ್ ೨೫೦ ರೂ., ನೈಟಿ ೧೧೫ರಿಂದ ೧೨೫ ರೂ., ಪ್ಲಾಜೋ ೧೩೦ ರೂ., ಕುರ್ತಿ ೧೫೦ ರೂ., ಸಾರಿ ೧೩೦ ರೂ., ಕಿಡ್ಸ್ ದಿನಬಳಕೆ ೩೦ ರೂ., ಬರ್ಮುಡ ೯೦ ರೂ. ಬ್ಲಾಂಕೆಟ್ ೨೨೫ ರೂ. ಬೆಡ್‌ಶೀಟ್ ೧೧೦ರೂ, ದಿಂದ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ ೩ ಸಾವಿರ ರೂಪಾಯಿಯ ಉಡುಪುಗಳನ್ನು ಖರೀದಿಸಿದ ಗ್ರಾಹಕರಿಗೆ ಬಕೆಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.
ಗ್ರಾಹಕರಿಗೆ ತಮಗಿಷ್ಟವಾದ ಉಡುಪುಗಳನ್ನು ಖರೀದಿಸಲು ಇದು ಸಕಾಲವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿ ಇದೆ. ಸುದೀರ್ಘ ವರ್ಷಗಳ ಅನುಭವಗಳೊಂದಿಗೆ ಬೊಳುವಾರಿನಲ್ಲಿ ಪ್ರಾರಂಭಗೊಂಡಿರುವ ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯು ಗ್ರಾಹಕರ ಮನಗೆದ್ದಿದ್ದು, ಮೂರು ಅಂತಸ್ತಿನ ವಿಶಾಲ ಮಳಿಗೆಯು ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ಸೌಲಭ್ಯವಿದೆ ಎಂದು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.