
ಪಂಜ ಪರಿಸರದಲ್ಲಿ ಜು.27 ರಂದು ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕೆಲವೆಡೆ ಅಪಾರ ಹಾನಿಯಾಗಿದೆ.

















ಪಂಜ ಪರಿಸರದಲ್ಲಿ ಅನೇಕ ಕೃಷಿ ತೋಟಗಳಲ್ಲಿ ಅಡಿಕೆ ಮರ, ತೆಂಗಿನ ಮರ ಧರೆಗೆ ಉರುಳಿದ್ದು ಅಪಾರ ನಷ್ಟ ಸಂಭವಿಸಿದೆ. ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಮೀಪವಿರುವ ಗುಡ್ಡ ಕುಸಿತ ಗೊಂಡು ಭಜನಾ ಮಂದಿರದ ಕಟ್ಟಡದ ಮೇಲೆ ಮಣ್ಣು ಬಿದ್ದಿದೆ.

ಪಂಜದ ಕಮಿಲದಲ್ಲಿ ವಿದ್ಯುತ್ ಲೈನ್ ಮೇಲೆ ಮರಬಿದ್ದು ವಿದ್ಯುತ್ ಪರಿವರ್ತಕದ ಕಂಬ ಮುರಿದಿದೆ. ಬಳ್ಪ-ಗುತ್ತಿಗಾರು ರಸ್ತೆಗೆ ಅನೇಕ ಕಡೆ ಮರಗಳು ಉರುಳಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು










