ಅರಂಬೂರು : ‘ಆಟಿಲಿ ಒಂದ್ ದಿನ’ ಕಾರ್ಯಕ್ರಮ

0

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಆಟಿಲಿ ಒಂದ್ ದಿನ ಕಾರ್ಯಕ್ರಮ ಇಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅರಂಬೂರು ಗೌಡ ಪುರುಷ ಘಟಕ ಸಮಿತಿ ಅಧ್ಯಕ್ಷ ಮನಮೋಹನ ಅರಂಬೂರು ವಹಿಸಿದ್ದರು. ವಾಸುದೇವ ಗೌಡ ಕುಡೆಕಲ್ಲು ಕಾರ್ಯಕ್ರಮ ಉದ್ಘಾಟಿಸಿದರು.


ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಗೌಡ ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಆಲೆಟ್ಟಿ ಗೌಡ ಮಹಿಳಾ ಗ್ರಾಮ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರ್, ಅರಂಬೂರು ಗೌಡ ಮಹಿಳಾ ಗ್ರಾಮ ಘಟಕದ ಅಧ್ಯಕ್ಷೆ ಶ್ರೀಮತಿ ಅನುರಾಧಾ ಕುರುಂಜಿ, ಶ್ರೀಮತಿ ಯಶೋಧ ಪದ್ಮಯ್ಯ ಪರಿವಾರಕಾನ ಉಪಸ್ಥಿತರಿದ್ದರು.


ಡಾ. ಅನುರಾಧಾ ಕುರುಂಜಿ ಪ್ರಸ್ತಾವನೆಗೈದರು. ತೇಜಸ್ ಚಿದ್ಗಲ್ ಸ್ವಾಗತಿಸಿ, ವೇದಾವತಿ ನೆಡ್ಚಿಲ್ ವಂದಿಸಿದರು. ಅಶೋಕ್ ಪೀಚೆ ಕಾರ್ಯಕ್ರಮ ನಿರೂಪಿಸಿದರು.