
ಭಾರೀ ಗಾಳಿ ಮಳೆ ಹಿನ್ನಲೆ ಕಲ್ಲುಗುಂಡಿ ನೆಲ್ಲಿಕುಮೇರಿ ಕೆ. ಎಫ್. ಡಿ.ಸಿ ಕಾಲೋನಿಯ ಮನೆಯೊಂದರ ಮೇಲೆ ವಿದ್ಯುತ್ ಕಂಬ ಬಿದ್ದು , ಮನೆಯವರು ಪ್ರಾಣಾಪಾಯದಿಂದ ಪಾರಾದ ಘಟನೆ ಜುಲೈ 27 ರಂದು ಸಂಭವಿಸಿದೆ.















ದಿನೇಶ್ ಅವರ ಮನೆಯ ಮುಂಭಾಗದಲ್ಲಿದ್ದ ವಿದ್ಯುತ್ ಕಂಬ ಭಾರೀ ಗಾಳಿ ಮಳೆಗೆ ಒಮ್ಮಿಂದೊಮ್ಮೆಲೆ ಮನೆಯ ಹಿಂಬದಿಯ ಅಡುಗೆ ಕೋಣೆಗೆ ಬಿದ್ದಿದೆ. ಪರಿಣಾಮವಾಗಿ ಮನೆಯ ಹಂಚು , ಪಕ್ಕಾಸು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.










