ಕಲ್ಲುಗುಂಡಿ : ಮಹಿಳೆಗೆ ಬೈಕ್ ಡಿಕ್ಕಿ , ಗಂಭೀರ ಗಾಯ

0

ಕಲ್ಲುಗುಂಡಿ ಪೋಸ್ಟ್ ಆಫೀಸ್ ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯವಾದ ಘಟನೆ ಜು. 27 ರಂದು ಸಂಜೆ ನಡೆದಿದೆ.

ಗಾಯಾಳುವನ್ನು ಸಂಪಾಜೆ ಬೈಲು ನಿವಾಸಿ ಕಮಲ ಚಿಡ್ಕಾರ್ ಎಂದು ತಿಳಿದು ಬಂದಿದೆ.
ಕಲ್ಲುಗುಂಡಿಯ ಅಂಚೆ ಕಚೇರಿಯ ಬಸ್ ತಂಗುದಾಣದಿಂದ ಸಂಪಾಜೆ ಕಡೆ ಹೋಗುವ ಬಸ್ ಹತ್ತಲು ರಸ್ತೆ ದಾಟುತ್ತಿದ್ದ ವೇಳೆ , ಅದೇ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ ಕೇರಳ ಮೂಲದ ಕೆ.ಎಲ್.13. ಎ 0808 ಬೈಕ್ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದಿದೆ . ಪರಿಣಾಮವಾಗಿ ಮಹಿಳೆಗೆ ಗಂಭೀರ ಗಾಯವಾಗಿದ್ದು ಕೆ.ವಿ. ಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.