ಜೆಸಿಐ ಮಡಂತ್ಯಾರಿನ ಆತಿಥ್ಯದಲ್ಲಿ
ಮಡಂತ್ಯಾರಿನ ಸೇಕ್ರೆಟ್ ಹಾರ್ಟ್ ಚರ್ಚ್ ಸಭಾಂಗಣ ಜು. 27 ರಂದು ನಡೆದ ವಲಯ 15 ರ ವ್ಯವಹಾರ ವಿಭಾಗದ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಸಿಟಿ ಘಟಕದ ಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ ದಾಮೋದರ ಕೋರಡ್ಕರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ವಲಯದ ಪ್ರತಿ ಘಟಕದ ಓರ್ವ ಸಾಧಕರ ಸಾಧನೆಯನ್ನು ಗುರುತಿಸಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಜೇಸಿಐ ಸುಳ್ಯ ಸಿಟಿಯಿಂದ ಇವರು ಆಯ್ಕೆಯಾಗಿದ್ದರು.
ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ಕಂಪ್ಯೂಟರ್ ತರಬೇತಿ ಶಿಕ್ಷಣ ಪಡೆದು 2 ವರ್ಷಗಳ ಕಾಲ ಬೋಧನೆ ಮಾಡುವುದರ ಮೂಲಕ ವೃತ್ತಿ ಆರಂಭ ಮಾಡಿದ ಇವರು ಬಳಿಕ ಸುಳ್ಯದ ಸರ್ವೋದಯ ಪ್ರಿಂಟಿಂಗ್ ಪ್ರೆಸ್ ಇಲ್ಲಿ ಡಿ.ಟಿ.ಪಿ. ಕೆಲಸವನ್ನು ಮಾಡುತ್ತಾ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಮಿಟಿ ‘ಬಿ’, ಇದರ ಆಡಳಿತದಡಿಯಲ್ಲಿ ಬರುವ ‘ಅಮರಜ್ಯೋತಿ ಪ್ರಿಂಟಿಂಗ್ ಪ್ರೆಸ್’ ನಲ್ಲಿ ಸುಮಾರು 16 ವರ್ಷಗಳಿಂದ ಡಿಸೈನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.















ಕಾಲೇಜು ಮ್ಯಾಗಜೀನ್‌ಗಳು, ವಿದ್ಯಾಸಂಸ್ಥೆಗಳ ಆಡಳಿತಾತ್ಮಕ ಪತ್ರಗಳು, ಕಡತಗಳ ತಯಾರಿಗಳು, ಕಾಲೇಜ್ ಡೇ ಅಥವಾ ಇನ್ನಿತರ ಕಾರ್ಯಕ್ರಮಗಳ ವಿಶಿಷ್ಟ ಶೈಲಿಯ ಆಮಂತ್ರಣಗಳು, ಜಾಹೀರಾತು ಸೆಟ್ಟಿಂಗ್ಸ್‌ಗಳು, ವಾಟ್ಸ್‌ಪ್ ಮೂಲಕ ಕಳುಹಿಸಲು ಅನುಕೂಲವಾಗುವ ಸ್ಟೇಟಸ್ ಡಿಸೈನ್ ವರ್ಕ್‌ಗಳು ಮಾಡಿರುವ ಇವರು ತನ್ನ ಸೇವಾ ಅವಧಿಯಲ್ಲಿ ಈಗಾಗಲೇ 85ಕ್ಕಿಂತಲೂ ಹೆಚ್ಚು ಮ್ಯಾಗಜೀನ್‌ಗಳು, 100 ಕ್ಕಿಂತಲೂ ಹೆಚ್ಚು ಸ್ಮರಣ ಸಂಚಿಕೆಗಳನ್ನು, ಸಾವಿರಾರು ವಿವಾಹ ಆಮಂತ್ರಣಗಳನ್ನು, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾತ್ಮಕ, ಶೈಕ್ಷಣಿಕ ಹೀಗೆ ಎಲ್ಲಾ ಕ್ಷೇತ್ರಕ್ಕೆ ಸಂಬಂದಪಟ್ಟ ಆಮಂತ್ರಣಗಳನ್ನು, ವಿಸಿಟಿಂಗ್ ಕಾರ್ಡ್, ಐಡಿ ಕಾರ್ಡ್, ಬ್ಯಾನರ್‌ಗಳು ಮುದ್ರಣ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ವೃತ್ತಿಯ ಜೊತೆಗೆ 2022 ರಲ್ಲಿ ಜೇಸಿಐ ಸುಳ್ಯ ಸಿಟಿ ಘಟಕಕ್ಕೆ ಪಾದಾರ್ಪಣೆ ಮಾಡಿದ ಇವರು ಸಕ್ರೀಯವಾಗಿ ಜೇಸಿಯ ಸದಸ್ಯೆಯಾಗಿ, ಪದಾಧಿಕಾರಿಯಾಗಿ ಪ್ರಸ್ತುತ ಉಪಾಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅರಂತೋಡಿನ ಚೀಮಾಡು ಚಂದ್ರಶೇಖರ ಕೆದಂಬಾಡಿ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರಿಯಾಗಿರುವ ಇವರ ಪತಿ ದಾಮೋದರರವರು ಕೆ.ವಿ.ಜಿ. ಪಾಲೆಟೆಕ್ನಿಕ್ ಕಾಲೇಜಿನ ಉದ್ಯೋಗಿ.
ಮಗಳು ಜನನಿ ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದಾಳೆ.










