ಗೂನಡ್ಕ ಮಾರುತಿ ಇಂಟರ್‌ನ್ಯಾಷನಲ್ ಸ್ಕೂಲ್ ನ ಜಾದ್ವಿ ಬಿ. ರೈ ಮತ್ತು ಫಾತಿಮತ್ ರಿಶಾ ಕಬಡ್ಡಿ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಜೋನಲ್ ಲೆವೆಲ್ ಅಂಡರ್ 17 ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಮಾರುತಿ ಇಂಟರ್‌ನ್ಯಾಷನಲ್ ಸ್ಕೂಲ್ ಗೂನಡ್ಕ ಇದರ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಜಾದ್ವಿ ಬಿ. ರೈ ಮತ್ತು ಫಾತಿಮತ್ ರಿಶಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾದ್ವಿ ಬಿ. ರೈ ಅರಂತೋಡಿನ ಶ್ರೀಮತಿ ಜಯಂತಿ – ಬಾಲಕೃಷ್ಣ ರೈ ಯವರ ಪುತ್ರಿ. ಫಾತಿಮತ್ ರಿಶಾ ಗೂನಡ್ಕದ ಶ್ರೀಮತಿ ರಮ್ಲತ್ – ಆರಿಫ್ ಟಿ.ಎ. ದಂಪತಿಯ ಪುತ್ರಿ.
ಇವರಿಬ್ಬರು ಜು. 8 ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆದ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಜಾದ್ವಿ ರೈ 3 ಕಿ.ಮೀ. ವೇಗದ ನಡಿಗೆಯಲ್ಲಿ ಪ್ರಥಮ ಹಾಗೂ 1500 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫಾತಿಮತ್ ರಿಶಾ 1500 ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.