ಗ್ರಾಮ ಆಡಳಿತಾಧಿಕಾರಿ ಶರತ್ ರವರಿಗೆ ತೀರ್ಥ ಕುಮಾರ್ ಕುಂಚಡ್ಕ ರವರಿಂದ ಅಧಿಕಾರ ಹಸ್ತಾಂತರ
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಕ್ತಾಯಗೊಂಡಿದ್ದು ನೂತನ ಸಮಿತಿ ರಚನೆಗೆ ಆದೇಶ ಬಂದ ಹಿನ್ನಲೆಯಲ್ಲಿ ಜು. 28 ರಂದು ಗ್ರಾಮ ಆಡಳಿತಾಧಿಕಾರಿಯವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.















ಕಳೆದ ಮೂರು ವರ್ಷದ ಅವಧಿಯಲ್ಲಿ ತೀರ್ಥ ಕುಮಾರ್ ಕುಂಚಡ್ಕ ರವರು ಅಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಮಾಡಿರುತ್ತಾರೆ. ಇವರ ಅವಧಿಯಲ್ಲಿ ಮೊರಂಗಲ್ಲು ಎಂಬಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ಉಳ್ಳಾಕುಲು ಚಾವಡಿ ನಿರ್ಮಿಸಿ ಬ್ರಹ್ಮ ಕಲಶೋತ್ಸವವನ್ನು ನೆರವೇರಿಸಲಾಗಿತ್ತು.
ದೇವಾಲಯದ ಹೋರಾಂಗಣಕ್ಕೆ ಶಾಶ್ವತ ಚಪ್ಪರ ನಿರ್ಮಿಸುವ ಮೂಲಕ ನೂತನ ಸದಾಶಿವ ಸಭಾಭವನ ಹಾಗೂ ತಡೆಗೋಡೆಯ ನಿರ್ಮಾಣ ಮತ್ತು ಸುಸಜ್ಜಿತ
ಶೌಚಾಲಯ ನಿರ್ಮಾಣ ಮಾಡಲಾಗಿತ್ತು.

ಗ್ರಾಮ ಆಡಳಿತಾಧಿಕಾರಿ ಶರತ್ ರವರಿಗೆ
ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾ ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಚ್ಚುತ ಮಣಿಯಾಣಿ ಅಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ಶ್ರೀಮತಿ ನಳಿನಿ ರೈ ಅಲೆಟ್ಟಿ, ಸೇ. ಸ. ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ, ಲತೀಶ್ ಗುಂಡ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.










