ಗುತ್ತಿಗಾರು ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಪದಗ್ರಹಣ

0

ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುತ್ತಿಗಾರಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಜು. 26 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಳ್ಯ ನೆಹರು ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾl ಅನುರಾಧ ಕುರುಂಜಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಟ್ರೀಸಾ ಜಾನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಸಂತೋಷ್ ಪಳಂಗಯ ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕಿಯರಾದ, ಸುಧಾರಾಣಿರವರು ಸ್ವಾಗತಿಸಿ ಅರ್ಪಿತ ರವರು ವಂದಿಸಿ, ಸಹ ಶಿಕ್ಷಕ ರಜನೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ನಾಯಕಿ ಯಾಗಿ ದೃತಿ.ಕೆ.ವಿ , ಉಪನಾಯಕನಾಗಿ ಅಂಶು ಎಮ್. ಆರ್, ಶಿಸ್ತು ನಾಯಕಿಯಾಗಿ ಫಿಯಾ ಮರಿಯಾ ಜೋಸ್, ಉಪ ಶಿಸ್ತು ನಾಯಕಿಯಾಗಿ ಅಪೇಕ್ಷ ಬಿ ಎಂ, ಸಾಂಸ್ಕೃತಿಕ ನಾಯಕಿಯಾಗಿ ಜುವೆಲ್ ಜೈಮಿ, ಉಪ ಸಾಂಸ್ಕೃತಿಕ ನಾಯಕಿಯಾಗಿ ಖುಷಿ ಕೆ, ಕ್ರೀಡಾ ನಾಯಕಿಯಾಗಿ ಫಾತಿಮತ್ ಸನಾ, ಉಪ ಕ್ರೀಡಾ ನಾಯಕಿಯಾಗಿ ರಚಿತಾ , ಮಾಧ್ಯಮ ನಾಯಕನಾಗಿ ದಿತೇಶ್ ಬಿ. ಉಪ ಮಾಧ್ಯಮ ನಾಯಕನಾಗಿ ಪ್ರಜ್ವಲ್ ಎಂ.ಡಿ, ಗೃಹಮಂತ್ರಿಯಾಗಿ ಶ್ರೀಶಾಂತ್ ಪಿ. ಬಿ, ಉಪ ಗೃಹ ಮಂತ್ರಿಯಾಗಿ ಹಂಸಿಕ ಕೆ. ಎಸ್, ಆರೋಗ್ಯ ನಾಯಕನಾಗಿ ಗುರುಪ್ರಸಾದ್ ಸಿ. ಪಿ,ಉಪ ಆರೋಗ್ಯ ನಾಯಕನಾಗಿ ಲವೀಶ್ ಎ. ಡಿ, ವಿರೋಧ ಪಕ್ಷದ ನಾಯಕನಾಗಿ ಶಾನೀಬ್ ಎ.ವಿ ಆಯ್ಕೆಗೊಂಡು ಪದ ಸ್ವೀಕಾರ ಮಾಡಿದರು.