ಬಳ್ಪದ ಸಂಜೀವಿನಿ ಒಕ್ಕೂಟದ ಮೂಲಕ ಸಂಜೀವಿನಿ ಗ್ರಾಮೀಣ ರೈತ ಸಂತೆಯ ಉದ್ಘಾಟನೆ ಜು. 28ರಂದು ಬಳ್ಪ ಗ್ರಾಮ ಸಭೆಯಲ್ಲಿ ಉದ್ಘಾಟನೆಗೊಂಡಿತು.















ಸ್ವ-ಸಹಾಯ ಸಂಘದ ಮಹಿಳೆಯರು ತಾವೇ ತಯಾರಿಸಿದ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳನ್ನು ಮಾರಾಟ ಮಾಡಿದರು. ಗ್ರಾಮೀಣ ಸಂತೆಯನ್ನು ಬಳ್ಪ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಪಿ.ಡಿ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕಾರ್ಜ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ನ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ, ಕಾರ್ಯದರ್ಶಿ ರಘು ಬಿ.ಎನ್ ಮತ್ತು ಸಿಬ್ಬಂದಿಗಳು, ತಾಲೂಕು ಸಂಪನ್ಮೂಲ ವ್ಯಕ್ತಿ (ಇ.ಪಿ)ರಮ್ಯ, ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ಎಂ, ಉಪಾಧ್ಯಕ್ಷೆ ವೆಂಕಮ್ಮ, ಕಾರ್ಯದರ್ಶಿ ಸೌಮ್ಯ ಕೆ ಮತ್ತು ಒಕ್ಕೂಟದ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.










