ಹಲವಾರು ಮನೆಗಳಿಗೆ ಸಂಪರ್ಕ ಅಪಾಯದಲ್ಲಿ
ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ 10 ಮನೆಗಳಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಸ್ತೆಯ ಎಡಭಾಗದಲ್ಲಿ ಸುಮಾರು 30-35 ಅಡಿಯಷ್ಟು ಆಳವಾದ ಕಡಿದಾದ ಬರೆ ಇದ್ದು ನಿನ್ನೆ ಸುರಿದ ಮಳೆಗೆ ಎಡಭಾಗದ ಬರೆಯು ಕುಸಿತವಾಗಿದ್ದು ಅಪಾಯದ ಸ್ಥಿತಿಯಲ್ಲಿದೆ.
















ಮಳೆಗೆ ಇನ್ನಷ್ಟು ಭೂಕುಸಿತ ವಾಗುವ ಸಾಧ್ಯತೆ ಇದ್ದು ಈ ರಸ್ತೆಯಲ್ಲಿ ಸಂಚಾರ ಕೂಡ ಅಪಾಯದ ಸ್ಥಿತಿಯಲ್ಲಿದೆ.
ಇನ್ನಷ್ಟು ಭೂಕುಸಿತ ಉಂಟಾದಲ್ಲಿ ನೂಚಿಲದ 10 ಮನೆಗಳಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗುತ್ತದೆ.
ಪಂಚಾಯತ್ ನವರು ಈ ಕುರಿತು ಗಮನ ಹರಿಸುವಂತೆ ಆ ಭಾಗದ ನಿವಾಸಿಗಳು ಆಗ್ರಹಿಸಿದ್ದಾರೆ.










