ಕೋಟೆ ಫೌಂಡೇಶನ್ ವತಿಯಿಂದ ಕೋಟೆಮುಂಡುಗಾರು ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನ ಸಾಮಗ್ರಿಗಳ ಕೊಡುಗೆ

0

ಕೋಟೆ ಫೌಂಡೇಶನ್ ವತಿಯಿಂದ ದ.ಕ.ಜಿ‌.ಪ ಹಿ.ಪ್ರಾ ಶಾಲೆ ಕೋಟೆಮುಂಡುಗಾರು ಇಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಜು.26 ರಂದು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಅಶ್ವಿನ್ ಕುಮಾರ್ ಎಂ. ಆರ್ ರವರು ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಪೆನ್ಸಿಲ್, ರಬ್ಬರ್ ಕ್ರೇಯಾನ್ಸ್ ನ್ನು ನೀಡಿ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಕೋಟೆ ಫೌಂಡೇಶನ್ ನ ಸ್ಥಾಪಕರಾದ ರಘುರಾಮ ಕೋಟೆ, ಅರ್ಚನಾ ಕೋಟೆ, ಗಣಪಯ್ಯ ಪೆರುವಾಜೆ, ಶ್ರೀಮತಿ ಶಶಿಕಲಾ ಗಣಪಯ್ಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಗೀತಾ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೋಹಿನಿ ಕಜೆಮೂಲೆ ಮತ್ತು ಸಹ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.