ಜೇಸಿಐ ಪಂಜ ಪಂಚಶ್ರೀಯ ಕ್ರಿಯಾಶೀಲ ಸದಸ್ಯರಾದ JFM ಪ್ರವೀಣ ಕುಂಜತ್ತಾಡಿ ರವರಿಗೆ ಸಾಧನ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜುಲೈ 27ರಂದು ಜೇಸಿ ಐ ಮಡ್ಯಂತರಿನ ಅತಿಥ್ಯದಲ್ಲಿ ಸೆಕ್ರೆಡ್ ಹಾರ್ಟ್ ಚರ್ಚ್ ಹಾಲ್ ನಲ್ಲಿ ನಡೆದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15 ರ ವ್ಯವಹಾರ ಸಮ್ಮೇಳನ ಮೃದಂಗ ಸಾಧನ ಜೆಸಿಗಳ ಸಾಧನೆಯ ತರಂಗ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು . ಈ ಸಂದರ್ಭದಲ್ಲಿ ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ JFM ವಾಚಣ್ಣ ಕೆರೆಮೂಲೆ ವಲಯಾ ಧಿಕಾರಿ JFD ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ JFM ಅಶ್ವಥ್ ಬಾಬ್ಲುಬೆಟ್ಪು, ಖಜಾಂಜಿ JFM ಗಗನ್ ತೆಂಕಪಾಡಿ ,ಉಪಾಧ್ಯಕ್ಷರಾದ ಜೇಸಿ ಕುಸುಮಾಧರ ಕಕ್ಯಾನ ,JFM ದೇವಿಪ್ರಸಾದ್ ಚಿಕ್ಮುಳಿ ,ಪೂರ್ವಾಧ್ಯಕ್ಷರಾದ JFM ಚೇತನ್ ತಂಟೆಪ್ಪಾಡಿ ಸದಸ್ಯರಾದ ಜೇಸಿ ಅಶೋಕ್ ಕುಮಾರ್ ದಿಡುಪೆ, ಜೇಸಿ ಮದನ್ ಕೊಲ್ಯ ಮತ್ತು JFM ಕಿರಣ ಕಂರ್ಬುನೆಕ್ಕಿಲ ಉಪಸ್ಥಿತರಿದ್ದರು.
















ಪ್ರವೀಣ್ ಶಾಮಿಯಾನ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯೊಂದನ್ನು ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಮುನ್ನಡೆಸುತ್ತಿರುವ ನಮ್ಮೂರಿನ ಹೆಮ್ಮೆಯ ಯುವಕ. ಇವರು ಕೆ. ದಾಸಪ್ಪ ಗೌಡ ಲೀಲಾವತಿ ದಂಪತಿಗಳ ಪುತ್ರನಾಗಿ ದಿನಾಂಕ 22-12-1996 ರಂದು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ. ಹಿ. ಪ್ರಾ. ಶಾಲೆ ಬಳ್ಪದಲ್ಲಿ ಹೈಸ್ಕೂಲ್ ಮತ್ತು ಪಿ.ಯು.ಸಿ. ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸವನ್ನು ಎಸ್.ಎಸ್. ಪಿ. ಯು. ಕಾಲೇಜು ಸುಬ್ರಹ್ಮಣ್ಯದಲ್ಲಿಯೂ ಬಿ. ಕಾಂ. ವಿದ್ಯಾಭ್ಯಾಸವನ್ನು ಕೆ. ಎಸ್. ಎಸ್. ಪದವಿ ಕಾಲೇಜಿನಲ್ಲಿಯೂ ಪೂರ್ಣಗೊಳಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ವ್ಯಾಪಾರದ ಕಡೆಗೆ ಆಕರ್ಷಿತರಾದ ಇವರು ತಂದೆಯ ಉದ್ಯಮವನ್ನು ಹೊಸ ಆಲೋಚನೆಗಳೊಂದಿಗೆ ಹೊಸ ವಿಧಾನಗಳೊಂದಿಗೆ ಮುಂದುವರೆಸಿದರು.ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಹೊತ್ತಿಗೆ ತಮ್ಮ ತಂದೆಗೆ ಅವರ ಉದ್ದಿಮೆಯಲ್ಲಿ ಸಹಕರಿಸುತ್ತಾ ಬೆಳೆದ ಪ್ರವೀಣ್ ಅವರಿಂದಲೇ ಉದ್ಯಮದ ಆಳ ಅಗಲಗಳನ್ನು ಅರಿತುಕೊಂಡವರು. ಇದೀಗ ಇವರ ಉದ್ದಿಮೆ ಸುತ್ತಲಿನ ಹತ್ತಾರು ಊರುಗಳಿಗೆ ಹರಡಿ ಇವರು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.
2023 ರಲ್ಲಿ ಜೇಸಿಐ ಪಂಜ ಪಂಚಶ್ರೀಗೆ ಸೇರ್ಪಡೆಗೊಂಡ ಪ್ರವೀಣ್ ಕುಂಜತ್ತಾಡಿಯವರು ಅದೇ ವರ್ಷ Out Standing New JC ಎಂಬ ಪ್ರಶಸ್ತಿಗೆ ಭಾಜನರಾದರು. ಜೇಸಿಯ ಸಕ್ರಿಯ ಸದಸ್ಯರಾಗಿ ಹಲವಾರು ಯಶಸ್ವಿ ಕಾರ್ಯಕ್ರಮಗಳ ನಿರ್ದೇಶಕರಾಗಿ ದುಡಿದು ಆರ್ಹವಾಗಿಯೇ ಸಾಧನಾ ಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವರು.










