ದೇವಚಳ್ಳ : ಅನಾರೋಗ್ಯದಿಂದ ಮಹಿಳೆ ಮೃತ್ಯು

0

ದೇವಚಳ್ಳ ಗ್ರಾಮದ ಅಡ್ಡನಪಾರೆ ಕಲ್ಲಾಜೆ ಕುಸುಮಾಧರ ಅವರ ಪತ್ನಿ ಪ್ರಮೀಳಾ (42) ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.

ಬ್ರೈನ್ ಹೆಮರೇಜ್ ಗೆ ಒಳಗಾದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಮೃತರು ಪತಿ, ಪುತ್ರ ಭವಿಷ್, ಪುತ್ರಿ ಮಹಿತಾ, ತಂದೆ, ತಾಯಿ, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.