














ಸುಳ್ಯ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯು 2025 -26 ನೇ ಸಾಲಿನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಐ.ಟಿ.ಐ ಸಂಸ್ಥೆಗಳ ಗುಣಮಟ್ಟ ವಿದ್ಯಾರ್ಥಿಗಳ ದಾಖಲಾತಿ,ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶವನ್ನು ಪರಿಗಣಿಸಿ “ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ” ಯು ನಡೆಸಿದ ಐ.ಟಿ.ಐ ಗ್ರೇಡಿಂಗ್ ನಲ್ಲಿ ಸಂಸ್ಥೆಯು 10 ರಲ್ಲಿ 8.3 ಅಂಕದೊಂದಿಗೆ ಉತ್ತಮ ಶ್ರೇಣಿ ಪಡೆದಿರುತ್ತದೆ.
ಇದಕ್ಕೆ ಕಾರಣಕರ್ತರಾದ ಸಂಸ್ಥೆಯ ಪ್ರಾಚಾರ್ಯರು,ಅಧ್ಯಾಪಕ ವೃಂದ,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ಎ.ಓ.ಎಲ್.ಇ.ಕಮಿಟಿ ‘ಬಿ’ ಇದರ ಚೇರ್ ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ.ಹಾಗೂ ಕಾರ್ಯದರ್ಶಿ ಜ್ಯೋತಿ ಆರ್.ಪ್ರಸಾದ್ ರವರು ಅಭಿನಂದಿಸಿದ್ದಾರೆ.










