
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಗಳಲ್ಲಿ ಜು.29 ರಂದು ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ನಾಗರ ಪಂಚಮಿ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
















ಆ ಪ್ರಯುಕ್ತ ಕ್ಷೀರಾಭಿಷೇಕ, ಎಳನೀರು ಅಭಿಷೇಕ,ಹಣ್ಣುಕಾಯಿ, ಪಂಚಾಮೃತ ,ಅಭಿಷೇಕ,ನಾಗ ತಂಬಿಲ ಸೇವೆಗಳು ನಡೆಯಿತು . ಅರ್ಚಕ ರಾಮಚಂದ್ರ ಭಟ್ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮ ನೆರವೇರಿಸಿ ಪ್ರಾರ್ಥಿಸಿದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು , ಗೌರವ ಸಲಹೆಗಾರರು, ಸೀಮೆಯ ಭಕ್ತರು ಉಪಸ್ಥಿತರಿದ್ದರು.ಬಳಿಕ ಗರಡಿ ಬೈಲು ಮೂಲ ನಾಗನಕಟ್ಟೆಯಲ್ಲಿ ಪೂಜೆ ನಡೆಯಿತು.










