ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ದಾಸನಕಜೆಯ ಉದಯಕುಮಾರ್ ನಿಧನ

0

2025ರ ಜನವರಿ ತಿಂಗಳಿನಲ್ಲಿ ಸೋಣಂಗೇರಿ ಸಮೀಪ ನಡೆದ ಕಾರು ಮತ್ತು ಸ್ಕೂಟಿ ಅಪಘಾತದಲ್ಲಿ‌ ಗಂಭೀರ ಗಾಯಗೊಂಡಿದ್ದ ನೆಲ್ಲೂರು‌ ಕೆಮ್ರಾಜೆ ಗ್ರಾಮದ ದಾಸನಕಜೆ ನಿವಾಸಿ ಉದಯಕುಮಾರ್ (47) ಎಂಬವರು ನಿಧನರಾಗಿದ್ದಾರೆ.

ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ಉದಯಕುಮಾರ್ ರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆಗಳು ನಡೆದಿದ್ದವು. ಬಳಿಕ ಕೋಮಾ ಸ್ಥಿತಿಯಲ್ಲೇ ಇದ್ದರು.‌ ಜು.29ರಂದು ತೀವ್ರ ಅಸ್ವಸ್ಥಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದರು.

ಮೃತರು ತಂದೆ ನಾರಾಯಣ ನಾಯಕ್, ತಾಯಿ ವಾರಿಜ, ಪತ್ನಿ ಅನುರಾಧ, ಮಗ ಪವನ್ ಕುಮಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.