ಕಾಂತಮಂಗಲ : ಪರಿಸರ ಜಾಗೃತಿ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕು
ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಳ್ಯ ಇದರ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವು
ಕಾಂತಮಂಗಲ ಸ. ಉ. ಹಿ. ಪ್ರಾ. ಶಾಲೆಯಲ್ಲಿ ಜು.29ರಂದು ನಡೆಯಿತು.

ವಿದ್ಯಾರ್ಥಿ ಶಾಲಾ ಮುಖ್ಯಮಂತ್ರಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಅಧ್ಯಕ್ಷತೆಯನ್ನು ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಮೀರಾ ಟಿ.ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕೃಷಿ ಅಧಿಕಾರಿಗಳಾದ ರಮೇಶ್ ಹಾಗೂ ಶಾಲಾ ಮುಖ್ಯಗುರುಗಳಾದ ಸ್ವರ್ಣಲತಾ ಮತ್ತು ಒಕ್ಕೂಟದ ಅಧ್ಯಕ್ಷರಾದ ಸತೀಶ್ ಅತ್ಯಡ್ಕ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ರಮೇಶ್ ಇವರು ಪರಿಸರ ಮಾಹಿತಿ ನೀಡಿದರು.
ಶಾಲಾ ಮಕ್ಕಳಿಗೆ ಗಿಡ ಗುರುತಿಸುವ ಹಾಗೂ ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತರಾದ ಮಕ್ಕಳಿಗೆ ಯೋಜನೆ ವತಿಯಿಂದ ಬಹುಮಾನ ವಿತರಿಸಲಾಯಿತು.
1ನೆ ಹಾಗೂ 2ನೆ ತರಗತಿಯ ಮಕ್ಕಳಿಗೆ ಸೇವಪ್ರತಿನಿಧಿಯಾದ ಶ್ರೀಮತಿ ಸೌಮ್ಯರವರು ಬಳಪವನ್ನು ನೀಡಿದರು.

ಒಕ್ಕೂಟದ ಅಧ್ಯಕರಾಧ ಸತೀಶ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಶ್ರೀಮತಿ ಆಶಾ ನೇರವೇರಿಸಿದರು. ಸೇವಾಪ್ರತಿನಿಧಿ ಶ್ರೀಮತಿ ಸೌಮ್ಯ ವಂದಿಸಿದರು.