ಸುಳ್ಯ ಲಯನ್ಸ್ ಕ್ಲಬ್ಗೆ ಹಲವು ಪ್ರಶಸ್ತಿಗಳು
ಜುಲೈ ೨೦ರಂದು ಮಂಗಳೂರಿನ ವಾಮಂಜೂರು ಚರ್ಚ್ ಸಭಾಂಗಣದಲ್ಲಿ ಜರಗಿದ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದ.ಕ, ಹಾಸನ, ಕೊಡಗು, ಚಿಕಮಗಳೂರು ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಲಯನ್ಸ್ ಕ್ಲಬಗಳಲ್ಲಿ ಸುಳ್ಯ ಲಯನ್ಸ್ ಕ್ಲಬ್ ಬೆಸ್ಟ್ ಟಾಪ್ ೧೦ ಕ್ಲಬ್ ಗಳಲ್ಲಿ ೭ ನೆ ಸ್ಥಾನ ಪಡೆದುಕೊಂಡು ಒಟ್ಟಾರೆ ೨೩ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.ಲಯನ್ಸ್ ಜಿಲ್ಲಾ ರಾಜ್ಯಪಾಲೆ ಲ ಬಿ. ಎಮ್. ಭಾರತಿ ಪಿಎಂಜೆಎಫ್ ಪ್ರಶಸ್ತಿ ಪ್ರಧಾನ ಮಾಡಿದರು.
೨೦೨೪-೨೫ ರ ಸಾಲಿನ ಸುಳ್ಯ ಲಯನ್ಸ್ ಅಧ್ಯಕ್ಷ ಲ ರಾಮಕೃಷ್ಣ ರೈ, ಕಾರ್ಯದರ್ಶಿ ಲ ರಾಮಚಂದ್ರ ಪಲ್ಲತಡ್ಕ, ಖಜಾಂಜಿ ಲ ರಮೇಶ್ ಶೆಟ್ಟಿ ಕ್ರಮವಾಗಿ ಬೆಸ್ಟ್ ಅಧ್ಯಕ್ಷ, ಬೆಸ್ಟ್ ಕಾರ್ಯದರ್ಶಿ, ಬೆಸ್ಟ್ ಖಜಾಂಜಿ ಪ್ರಶಸ್ತಿಗಳನ್ನು ಪಡೆದುಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ನ ೨೦ ಕ್ಕೂ ಅಧಿಕ ಸದಸ್ಯರು ಭಾಗವಹಿಸಿದ್ದರು.
ಪ್ರಶಸ್ತಿಗಳ ವಿವರ
ಬೆಸ್ಟ್ ಪರ್ಮನೆಂಟ್ ಪ್ರಾಜೆಕ್ಟ್: ಸುಳ್ಯದ ಕುರುಂಜಿಬಾಗ್ ನಲ್ಲಿ ನಿರ್ಮಿಸಿದ ರಿಕ್ಷಾ ನಿಲ್ದಾಣ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
.ಅಗ್ರಿಕಲ್ಚರ್ ಸಪೋರ್ಟ್: ಸುಳ್ಯದ ಕೋಡಿಯಾಲಾಬೈಲ್ ಶಾಲೆಯ ಲಯನ್ಸ್ ಅಡಿಕೆತೋಟ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕೇರ್ ಫಾರ್ ಸೀನಿಯರ್ ಸಿಟಿಜನ್: ಪ್ರಥಮ ಸ್ಥಾನ.
ಸಿವಿಕ್ ಅಂನೇಟಿಸ್: ದ್ವಿತೀಯ ಸ್ಥಾನ.
ಗವರ್ನಮೆಂಟ್ ಹಾಸ್ಪಿಟಲ್ ಸುಪೋರ್ಟ್: ದ್ವಿತೀಯ ಸ್ಥಾನ.
ಲವ್ ದಿ ನ್ಯಾಷನ್: ದ್ವಿತೀಯ ಸ್ಥಾನ.
ಸ್ಕೂಲ್ ಸುಪೋರ್ಟ್: ತೃತೀಯ ಸ್ಥಾನ.
ಒರ್ಗನ್ ಡೊನೇಷನ್: ತೃತೀಯ ಸ್ಥಾನ.
ಲೀಗಲ್ ಅವರ್ನೆಸ್:೪ನೇ ಸ್ಥಾನ.
ಎಜುಕೇಶನ್ ಸಪೋರ್ಟ್ ೫ ನೇ ಸ್ಥಾನ.
ವೈಯಕ್ತಿಕ ಪ್ರಶಸ್ತಿಗಳು:
ಮಲ್ಟಿಪಲ್ ಡಿಸ್ಟಿಕ್ಟ್ ಬೆಸ್ಟ್ ಉಒಖಿ ಕೂರ್ಡಿನಟರ್ ೨೦೨೩-೨೪ ಲ ಜಯರಾಮ್ ದೇರಪ್ಪಜ್ಜನಮನೆ
ಮಲ್ಟಿಪಲ್ ಡಿಸ್ಟ್ರಿಕ್ಟ್ ಬೆಸ್ಟ್ ಪ್ರಾಂತ್ಯಾಧ್ಯಕ್ಷ ೨೦೨೩-೨೪ ಲ ರೇಣುಕಾ ಸದಾನಂದ ಜಾಕೆ.
ಡಿಸ್ಟ್ರಿಕ್ಟ್ ಬೆಸ್ಟ್ ಪ್ರಾಂತ್ಯಾಧ್ಯಕ್ಷ ಲ ಗಂಗಾಧರ ರೈ
ಡಿಸ್ಟ್ರಿಕ್ಟ್ ಬೆಸ್ಟ್ ವಲಯದ್ಯಕ್ಷೆ ಲ ರೂಪಶ್ರೀ ಜೆ ರೈ.
ಡಿಸ್ಟ್ರಿಕ್ಟ್ ಬೆಸ್ಟ್ ಬ್ಯಾಡ್ಮಿಂಟನ್ ಕೂರ್ಡಿನಟರ್ ಲ ಡಾ ಲಕ್ಷ್ಮೀಶ್. ಕೆ.
ಡಿಸ್ಟ್ರಿಕ್ಟ್ ಡೈಮಂಡ್ ಕ್ಯಾರಿಯರ್ ಗೈಡೆನ್ಸ್ ಕೂರ್ಡಿನಟರ್ ಲ ಶರತ್ ಭಂಡಾರಿ ಎನ್.
ಬೆಸ್ಟ್ ರಿಜನ್ ರಾಯಬಾರಿ ಲ ರೇಣುಕಾ ಎಸ್ ಜಾಕೆ.
ಬೆಸ್ಟ್ ಅಸೋಸಿಯಟ್ ಕೂರ್ಡಿನಟರ್ ಬ್ಯಾಡ್ಮಿಂಟನ್ ಲ ಜಯರಾಂ ದೇರಪ್ಪಜ್ಜನಮನೆ.
ಗೋಲ್ಡನ್ ಕೂರ್ಡಿನಟರ್ ಡಯಬಿಟಿಸ್ ಲ ಜಯಪ್ರಕಾಶ್ ರೈ
ಬೆಸ್ಟ್ ಡಿಸ್ಟ್ರಿಕ್ಟ್ ಕೂರ್ಡಿನಟರ್ ಕ್ವೆಸ್ಟ್ ಲ ರಂಗನಾಥ್ ಪಿ. ಎಮ್

























