ಹೊನ್ನೆಮೂಲೆ- ಮಾವಿನಗೊಡ್ಲು ವಾರದಿಂದ ಕರೆಂಟ್ ಇಲ್ಲ

0

ದೂರಿಕೊಂಡರೂ ಸ್ಪಂದಿಸದ ಮೆಸ್ಕಾಂ ಇಲಾಖೆ

ದೇವಚಳ್ಳ ಗ್ರಾಮದ ಹೊನ್ನೆಮೂಲೆ – ಮಾವಿನಗೋಡ್ಲು ಭಾಗದಲ್ಲಿ ಭಾರೀ ಗಾಳಿ ಮಳೆ ಪರಿಣಾಮ ವಿದ್ಯುತ್ ವ್ಯತ್ಯಯ ವಾಗಿದ್ದು ಕಳೆದ ಒಂದು ವಾರದಿಂದ ಆ ಭಾಗದ ಜನತೆಗೆ ಕತ್ತಲೆಯಲ್ಲೇ ದಿನ ದೂಡುವಂತಾಗಿದೆ.

ವಿದ್ಯುತ್ ತಂತಿ ಕೆಳಗೆ ಬಿದ್ದಿದ್ದರು ಕೂಡ ಊರವರು ಹಲವಾರು ಬಾರೀ ಮೆಸ್ಕಾಂಗೆ ತಿಳಿಸಿದರೂ ಮೆಸ್ಕಾಂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಇನ್ನೂ ಎಷ್ಟು ದಿನ ಕತ್ತಲೆಯಲ್ಲಿ ದಿನ ಕಳೆಯಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಜನಪ್ರತಿನಿಧಿಗಳು ಈ ಸಮಸ್ಯೆ ಅರಿತು ಮೆಸ್ಕಾಂ ಗೆ ತಿಳಿಸಿ ವ್ಯವಸ್ಥೆ ಸರಿಪಡಿಸಬೇಕಾಗಿದೆ.