
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ನೌಕರರಾಗಿದ್ದು ಜು.31 ರಂದು ನಿವೃತ್ತಿಗೊಂಡ ಮೂವರನ್ನು ದೇವಾಲಯದ ಆಡಳಿತ ಕಛೇರಿಯಲ್ಲಿ ಗೌರವಿಸಿ ಬೀಳ್ಕೊಡಲಾಯಿತು.
















ಕಛೇರಿ ಮುಖ್ಯಸ್ಥರಾದ ಎನ್. ಪದ್ಮನಾಭ ಶೆಟ್ಟಿಗಾರ್, ದಿನಸಿ ವಿಭಾಗದ ಗುಮಾಸ್ತರಾದ ರಮೇಶ್.ಎಸ್, ಡೈನಿಂಗ್ ಹಾಲ್ ನ ನೌಕರೆ ಶ್ರೀಮತಿ ರತಿಶೆಟ್ಟಿ ಇವರುಗಳನ್ನು ಶಾಲು ಹೊಂದಿಸಿ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು. ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಲೀಲಾ ಮನಮೋಹನ್, ಶ್ರೀಮತಿ ಪ್ರವೀಣ ರೈ, ಎಲ್ಲಾ ವಿಭಾಗಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.











