














ಕೊಡಗು ಸಂಪಾಜೆ ಚಡಾವಿನಲ್ಲಿ ಕಳ್ಳರ ತಂಡವೊಂದು ಮನೆಗೆ ನುಗ್ಗಿ ಚಿನ್ನಾಭರಣ ಕಳವು ಗೈದಿರುವ ಘಟನೆ ಆ.2 ರಂದು ವರದಿಯಾಗಿದೆ.
ಚಡಾವು ನಿವಾಸಿ ಶ್ರೀ ಮುತ್ತಪ್ಪನ್ ಹೋಟೆಲ್ ಮಾಲಕ ರಾಧಾಕೃಷ್ಣರವರ ಮನೆಯಿಂದ ೩ ಪವನ್ ಚಿನ್ನಾಭರಣ ಹಾಗೂ 25೦೦ ಸಾವಿರ ರೂ. ಕಳವು ಆಗಿದೆ ಎಂದು ತಿಳಿದು ಬಂದಿದೆ. ಕೊಡಗು ಸಂಪಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.










