














ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ನಾಗವೇಣಿ ಕರ್ಮಜೆಯವರು ಜು.31 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಸನ್ಮಾನ ಕಾರ್ಯಕ್ರಮವು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್,ಡಾ.ಕರುಣಾಕರ,ಗ್ರೇಡ್ – 2 ನರ್ಸಿಂಗ್ ಸೂಪರಿಟೆಂಡೆಂಡ್ ಶ್ರೀಮತಿ ಪುಷ್ಪಾವತಿಯವರು ಶ್ರೀಮತಿ ನಾಗವೇಣಿಯವರನ್ನು ಶಾಲು,ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.

ಸನ್ಮಾನ ಸ್ವೀಕರಿಸಿದ ನಾಗವೇಣಿ ಕರ್ಮಜೆಯವರು ತಾನು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶುಶ್ರೂಷಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಯಲ್ಲಿ ತರಬೇತಿ ಪಡೆದ ಇವರು 1993 ರಲ್ಲಿ ಅಲ್ಲಿಯೆ ಸೇವೆ ಪ್ರಾರಂಭಿಸಿದರು.

ಬಳಿಕ ಸುಳ್ಯ ಸರಕಾರಿ ಆಸ್ಪತ್ರೆ,ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿಹೊಂದಿದರು.
ಇವರು ಕಳಂಜ ಗ್ರಾಮದ ಕರ್ಮಜೆ ಪ್ರಗತಿಪರ ಕೃಷಿಕ ಹರಿಶ್ಚಂದ್ರ ಜೆ.ಕೆ.ಯವರ ಪತ್ನಿಯಾಗಿದ್ದು ಇವರ ಪುತ್ರ ಕಿಶನ್ ಕರ್ಮಜೆ ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಪುತ್ರಿ ನಿಶ್ಮಿತಾ ರವರಿಗೆ ವಿವಾಹವಾಗಿದ್ದು ಪತಿ ಸೌತ್ ಆಫ್ರಿಕಾದ ತಾಂಜೇನಿಯಮ್ ನಲ್ಲಿ ಇಂಜಿನಿಯರ್ ಆಗಿರುವ ಕಾರ್ತಿಕ್ ಅಲೆಪ್ಪಾಡಿಯವರೊಂದಿಗೆ ನೆಲೆಸಿದ್ದಾರೆ.
ಇವರು ಇಂಡಿಯನ್ ಸ್ಕೂಲ್ ದಾರೆಸ್ ಸಲಾಮ್ ತನ್ಜೇನಿಯ ಈಸ್ಟ್ ಆಫ್ರಿಕಾ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ರಿ ಈಶಿಕ ಜೊತೆಗಿದ್ದಾರೆ.










