ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ಜು. ೨೯ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯದಾಸ್ ರವರು ವಹಿಸಿದರು. ಅತಿಥಿಗಳಾಗಿ ಶಾಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿ ರುಕ್ಮಯದಾಸ್, ಮುಖ್ಯ ಅತಿಥಿಗಳಾಗಿ ಪೋಷಕ ಸಂಘದ ಅಧ್ಯಕ್ಷ ರಮೇಶ್ ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳು ಬಹಳ ಪ್ರೀತಿಯಿಂದ ವಿದ್ಯಾರ್ಥಿ ನಾಯಕರುಗಳನ್ನು ಹಾಗೂ ಅತಿಥಿಗಳನ್ನು ವೇದಿಕೆಗೆ ಕರೆ ತಂದರು.
ಶಾಲಾ ನಾಯಕಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಚಾರುಶ್ರೀ ಹೆಚ್.ಆರ್ ಹಾಗೂ ಶಾಲಾ ನಾಯಕನಾಗಿ ಹತ್ತನೇ ತರಗತಿ ವಿದ್ಯಾರ್ಥಿ ಅಕ್ಷಯ್ ಎನ್. ಪಿ ಇವರು ಆಯ್ಕೆಯಾದರು. ಹಾಗೂ ಉಪನಾಯಕರುಗಳಾಗಿ ೧೦ನೇ ತರಗತಿ ವಿದ್ಯಾರ್ಥಿಗಳಾದ ವಿಷ್ಣು ಪ್ರಸಾದ್ ಎನ್ ಮತ್ತು ಜೈನಿಕ ಸಿ.ಬಿ ರವರು ಆಯ್ಕೆಗೊಂಡರು.















ಕ್ರೀಡಾ ನಾಯಕರುಗಳಾಗಿ ಧನ್ವಿತ್ ಕುಮಾರ್ ಒ.ಬಿ . ಹಾಗೂ ರಮ್ಯಾ ಪಿ.ಎಸ್ ,ಶಿಸ್ತು ಪಾಲನೆಯ ನಾಯಕರುಗಳಾಗಿ ಜಾಬೀರ್ ಅಹ್ಮದ್ ಟಿ. ಝೆಡ್, ಉಪಮಂತ್ರಿಯಾಗಿ ಜಾನ್ವಿ ಬಿ. ರೈ, ಸಾಹಿತ್ಯಿಕ ಮಂತ್ರಿಯಾಗಿ ತಿಶಾ ಖದೀಜ, ಅಸೆಂಬ್ಲಿ ನಾಯಕರಾಗಿ ಧೃತಿ ಕೆ. ಸಿ, ಸಾಂಸ್ಕೃತಿಕ ಮಂತ್ರಿಯಾಗಿ ಯುಕ್ತಾ ಬಿ. ಕೆ, ಇವರುಗಳು ಆಯ್ಕೆಗೊಂಡರು.
ಸಹಪಠ್ಯ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಎಲ್ಲ ಶಾಲೆಯ ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳನ್ನಾಗಿ ರಚಿಸಿ ಆ ತಂಡಗಳಿಗೆ ಜವಾಬ್ದಾರಿಯನ್ನು ತಂಡದ ನಾಯಕರುಗಳಾದ ಅಬ್ದುಲ್ ನದೀಮ್ ಪಿ ಎ, ಸಂಪ್ರೀತ್ ಹೆಚ್. ವೈ, ಹನ್ಸಿಕ ಪಿ, ಮಾನ್ಯ ಪಿ.ಕೆ ಅವರಿಗೆ ಈ ಸಂದರ್ಭದಲ್ಲಿ ಹಂಚಲಾಯಿತು. ಮಾತ್ರವಲ್ಲದೆ ಸ್ಪೋರ್ಟ್ ಕ್ಲಬ್ ನಾಯಕರಾಗಿ ಮೊಹಮ್ಮದ್ ರಿಜ್ವಾನ್ ಎಸ್ ಎ., ಇಕೋ ಕ್ಲಬ್ ನಾಯಕರಾಗಿ ಶನ್ವಾಜ್ ಕುಂಭಕೋಡು, ಪರ್ಫಾರ್ಮೆನ್ಸ್ ಕ್ಲಬ್ ನಾಯಕರಾಗಿ ಇಕ್ಷಿತಾ ನಾಯ್ಕ್ ಬಿ ಯು., ಲಿಟರೇಚರ್ ಕ್ಲಬ್ ನಾಯಕಿಯಾಗಿ ಫಾತಿಮತ್ ರಿಷಾ, ಸೈನ್ಸ್ ಕ್ಲಬ್ ನಾಯಕರುಗಳಾಗಿ ನಂದಿತಾ ಕೆ. ಪಿ. ಮತ್ತು ಚಿನ್ಮಯಿ ಕೆ. ಪಿ. ಇವರುಗಳು ಆಯ್ಕೆಯಾದರು.
ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಸ್ವಾಗತಿಸಿ, ನಾಯಕ, ನಾಯಕಿಯರು ಎಲ್ಲ ವಿದ್ಯಾರ್ಥಿಗಳನ್ನು ಸರ್ವತೋಮುಖ ಅಭಿವೃದ್ಧಿಗೆ ಕೊಂಡೊಯ್ಯಲು ಬೇಕಾದ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮ ವಿಭಾಗದ ವಿದ್ಯಾರ್ಥಿ ಗಳೊಂದಿಗೆ ಭಾಗವಹಿಸಿ ಉತ್ತಮ ನಾಯಕ ನಾಯಕಿ ಎನ್ನುವ ಕೀರ್ತಿಯನ್ನು ಪಡೆಯಬೇಕೆಂದು ಆಶಿಸಿದರು, ಹಾಗೂ ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಂತರ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಕಿಶೋರ್ ಕುಮಾರ್ ರವರು ಪ್ರತಿಯೊಬ್ಬ ವಿದ್ಯಾರ್ಥಿ ನಾಯಕನು ಆದರ್ಶ ನಾಯಕನಾಗಲು ಪ್ರಯತ್ನಿಸಬೇಕು ಮತ್ತು ಶಾಲಾ ಹಂತದಲ್ಲಿ ತಮ್ಮಲ್ಲಿ ಬೆಳೆಸಿಕೊಂಡ ನಾಯಕತ್ವದ ಗುಣಗಳು ಜೀವನದ ಮುಂದಿನ ದಿನಗಳಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಶಾಲಾ ಹಂತದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಹೇಳುತ್ತಾ ಆಯ್ಕೆಯಾದಂತಹ ನಾಯಕರುಗಳಿಗೆ ಶುಭವನ್ನು ಹಾರೈಸಿದರು. ಪೋಷಕ ಸಮಿತಿಯ ಅಧ್ಯಕ್ಷರಾದ ರಮೇಶ್ ರವರು ಇತರ ಚಟುವಟಿಕೆಗಳೊಂದಿಗೆ ಶಿಕ್ಷಣದಲ್ಲೂ ಉನ್ನತ ಸ್ಥಾನಕ್ಕೆ ಏರಬೇಕೆಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ದಾಸ್ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳು ಶಾಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಶಾಲೆಗೆ ಹಾಗೂ ತಮ್ಮ ಹೆತ್ತವರಿಗೆ ಕೀರ್ತಿಯನ್ನು ತರುವಲ್ಲಿ ಯಶಸ್ವಿಯಾಗಬೇಕು ಶುಭ ಹಾರೈಸಿದರು.
ಶ್ರೀಮತಿ ಸರಿನಾ ಫಾತಿಮಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.










