ಪೆಹಲ್ಗಾಮ್ ಕೃತ್ಯಕ್ಕೆ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ನೀಡಿದ ಉತ್ತರ ಇತಿಹಾಸದ ಮೈಲಿಗಲ್ಲು – ಕ್ಯಾ.ಬ್ರಿಜೇಶ್ ಚೌಟ

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ ಹೆಸರಿನ ಮೂಲಕ ಇಡೀ ವಿಶ್ವಕ್ಕೆ ಭಾರತದ ಸೇನಾ ಪಡೆಯ ಶಕ್ತಿಯನ್ನು ತೋರಿಸಿಕೊಟ್ಟಿದೆ. ಪಾಕಿಸ್ತಾನಿ ಉಗ್ರರ ನೆಲೆಯನ್ನು ಟಾರ್ಗೆಟ್ ಮಾಡಿ ಭಾರತದಸೇನಾಪಡೆ ಉಗ್ರರ ತಾಣಗಳನ್ನುನಾಶ ಮಾಡಿ ಇತಿಹಾಸ ಸೃಷ್ಟಿಸಿರುವುದು ಭಾರತ ಮತ್ತು ಪಾಕಿಸ್ತಾನ ಯುದ್ಧದ
ಮೈಲಿಗಲ್ಲು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಹೇಳಿದ್ದಾರೆ.

ಮಂಥನ ವೇದಿಕೆ ಸುಳ್ಯ ಇದರ ವತಿಯಿಂದ ಆ.2 ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ “ಸಿಂಧೂರ ವಿಜಯ ಭಾರತದತ್ತ ವಿಶ್ವದ ಚಿತ್ತ” ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ಕಿತ್ತೆಸೆದ ಮೇಲೆ ಕಾಶ್ಮೀರದಲ್ಲಿ ಆರ್ಥಿಕತೆಯಲ್ಲಿ ಬೆಳವಣಿಗೆ ಕಂಡುಬಂದಿದೆ.
ಇಲ್ಲಿನಮಹತ್ತರವಾದ ಬದಲಾವಣೆಯನ್ನು
ಸಹಿಸದೆ ಪ್ರವಾಸೋದ್ಯಮ ಬೆಳೆಯಬಾರದು ಅಭಿವೃದ್ಧಿ ಹೊಂದಬಾರದು ಎಂಬ ಕಾರಣಕ್ಕಾಗಿ ಪಾಕಿಸ್ತಾನಿ ನುಸುಳುಕೋರ ಭಯೋತ್ಪಾದಕರು
ಪೆಹಲ್ಗಾಮ್ ನಲ್ಲಿ ಧಾಳಿ ನಡೆಸಿದ್ದಾರೆ.
ಈ ಧಾಳಿಗೆ ಉತ್ತರವಾಗಿ ಭಾರತದ ಸೇನೆಯು ಟಾರ್ಗೆಟ್ ಮಾಡಿಪಾಕಿಸ್ತಾನದ ಪ್ರಜೆಗಳಿಗಾಗಲಿ ಅಥವಾ ಅವರ ಮಿಲಿಟರಿ ಪ್ರಜೆಗಳಿಗಾಗಲಿ ಯಾವುದೇ ರೀತಿಯ ಹಾನಿಯಾಗದಂತೆ ಉಗ್ರವಾದಿಗಳ ನೆಲೆಯನ್ನು ಟಾರ್ಗೆಟ್ ಮಾಡಿ ದ್ವಂಸ ಮಾಡಿದೆ. ಈ ಧಾಳಿಯ ಬಗ್ಗೆ
ಸುಮಾರು 193 ರಾಷ್ಟ್ರಗಳ ಪೈಕಿ ಕೇವಲ 3 ರಾಷ್ಟ್ರಗಳನ್ನು ಬಿಟ್ಟರೆ ಬೇರೆ ಯಾವುದೇ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿಲ್ಲ.
ಯುದ್ಧ ಭೂಮಿಯನ್ನು ಮೀರಿದ ಯುದ್ಧದ ಸ್ಥಿತಿ ಇಂದು ನಮ್ಮ ಮಂದಿದೆ. ಆದ್ದರಿಂದ ಅತ್ಯಂತ ಜವಾಬ್ದಾರಿಯುತ ರಾಷ್ಟ್ರವಾದ ಭಾರತ ಜವಾಬ್ದಾರಿಯಿಂದ ವರ್ತಿಸಿದೆ. ನಿಖರವಾಗಿ ಗುರಿಯನ್ನು ನಿರ್ಧರಿಸಿ ಆಪರೇಷನ್ ಸಿಂಧೂರ ನಡೆಸಲಾಗಿದೆ.
ದೇಶ ರಕ್ಷಣೆಯಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ ಆದುದರಿಂದ ಪ್ರತಿಯೊಬ್ಬ ಪ್ರಜೆಯು ಸೈನಿಕರ ಮಾನಸಿಕತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಸೈನಿಕರನ್ನು ಹಾಗೂ ಸೈನಿಕ ಪರಂಪರೆಯನ್ನು ಸ್ಮರಿಸಿ ಗೌರವಿಸಬೇಕೆಂದು ಹೇಳಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತಾಗಿ ಆಪರೇಷನ್ ಸಿಂಧೂರದ ಬಗ್ಗೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.















ಭಾರತದ ಈಗಿನ ಪರಿಸ್ಥಿತಿ ಹಾಗೂ ನಿಲುವುಗಳು ಬಗ್ಗೆ ವಿದೇಶ ರಾಷ್ಟ್ರಗಳು ಗೌರವಿಸಿದೆ. ಭಾರತವನ್ನು ಜಾಗತಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು. ದ. ಕ. ಜಿಲ್ಲೆಯಲ್ಲಿ ಪೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿದೆ ಎಂದರು.
ಪುರುಷೋತ್ತಮ ಕಿರ್ಲಾಯ, ಪ್ರವೀಣ್ ರಾವ್ ದೊಡ್ಡ ತೋಟ, ಭರತ್ ಅಡೂರು, ಕಿರಣ್ ಪುಷ್ಪಗಿರಿ, ವಿಕ್ರಂ ಅಡ್ಪಂಗಾಯ, ನಂದನ್ ಐವರ್ನಾಡು, ಮೋಹನ್ ಐವರ್ನಾಡು, ಅಡ್ಡಂತಡ್ಕ ದೇರಣ್ಣ ಗೌಡ ರವರು ಪ್ರಶ್ನೆಗಳನ್ನು ಕೇಳಿದರು.
ಶಾಸಕಿ ಕು. ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್. ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಎ. ಒ. ಎಲ್. ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಆರ್ ಎಸ್ ಎಸ್ ಪ್ರಮುಖರಾದ
ನ. ಸೀತಾರಾಮ ಹಾಗೂ ಮತ್ತಿತರರುಭಾಗವಹಿಸಿದ್ದರು.
ಮಂಥನ ವೇದಿಕೆಯ ಅಧ್ಯಕ್ಷ ಪ್ರದ್ಯುಮ್ನ ಉಬರಡ್ಕರವರು ಅಧ್ಯಕ್ಷತೆವಹಿಸಿ,ಸ್ವಾಗತಿಸಿದರು.ಕಾರ್ಯದರ್ಶಿ ಕಿಶನ್ ಜಬಳೆ ವಂದಿಸಿದರು.
ಸಿ.ಎ ಬ್ಯಾಂಕ್ ಸಿಇಒ ಸುದರ್ಶನ ಸೂರ್ತಿಲ ವಂದೇ ಮಾತರಂ ಹಾಡಿದರು. ಹರ್ಷಿತ್ ಮರ್ಕಂಜ ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು.
ಮಧುರ ಎಂ.ಆರ್ ಮತ್ತು ಕುಸುಮಾಧರ ಎ. ಟಿ ಕಾರ್ಯಕ್ರಮನಿರೂಪಿಸಿದರು.
ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು, ಉಪತಾಶಿಲ್ದಾರ್, ಇಲಾಖೆಯ ಅಧಿಕಾರಿಗಳು, ವಕೀಲರು ವೈದ್ಯರು ಉಪನ್ಯಾಸಕರು, ಶಿಕ್ಷಕರು, ಎನ್ಸಿಸಿ ವಿದ್ಯಾರ್ಥಿಗಳು, ಎಬಿವಿಪಿ ವಿದ್ಯಾರ್ಥಿಗಳು, ಚಿಂತಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಸೇನೆಯಲ್ಲಿರುವಾಗ ಹುತಾತ್ಮರಾದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಪರೇಷನ್ ಸಿಂಧೂರ ಯುದ್ಧ ಹೋರಾಟದ ಸಾಕ್ಷ್ಯ ಚಿತ್ರವನ್ನುಪ್ರದರ್ಶಿಸಲಾಯಿತು. ಸಭಾಂಗಣದಲ್ಲಿ ಹಾಕಿದ್ದ ಆಸನಗಳೆಲ್ಲವೂ ಭರ್ತಿಯಾಗಿತ್ತು.
ಕಾರ್ಯಕ್ರಮದ ಬಳಿಕ ಆಗಮಿಸಿದ ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು . ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಮಾಡಲಾಗಿತ್ತು. ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.










