ಜಾಲ್ಸೂರು : ಸಾರ್ವಜನಿಕ ಜನಸಂಪರ್ಕ ಸಭೆ

0

ಸುಳ್ಯ ತಾಲೂಕು ಹಿರಿಯ ನಾಗರಿಕರ ಸಂಘದ ಉಪ ಘಟಕ, ಜಾಲ್ಸೂರು ಗ್ರಾಮ ಪಂಚಾಯತ್, ಸುಳ್ಯ ಪೋಲಿಸ್ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಜು. 30 ರಂದು ” ಮನೆ ಮನೆಗೆ ಪೋಲಿಸ್” ಸಾಮಾಜಿಕ ಸುರಕ್ಷತೆಗಾಗಿ ವಿನೂತನ ಕಾರ್ಯಕ್ರಮದ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸುಳ್ಯ ಠಾಣಾಧಿಕಾರಿ ಸಂತೋಷ್ ಬಿ.ಪಿ.ಹಾಗೂ ಎ ಎಸ್ ಐ ತಾರನಾಥ್ ಇಲಾಖೆಯ ಕಾರ್ಯಕ್ರಮದ ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರ ಸಂಘದ ಜಾಲ್ಸೂರು ಘಟಕದ ಸಂಚಾಲಕ ಚೆನ್ನಕೇಶವ ಜಾಲ್ಸೂರು, ಸಂಘದ ಕಾರ್ಯದರ್ಶಿ ಗೋಪಾಲ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಪ್ರೊ, ದಾಮೋದರ ಗೌಡ ಸ್ವಾಗತಿಸಿ, ಚೆನ್ನಕೇಶವ ಜಾಲ್ಸೂರು ವಂದಿಸಿದರು.