ಸುಳ್ಯದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಉದ್ಯಾನವನ ಆಸ್ಪತ್ರೆಯಲ್ಲಿ ಖಾಯಂ ವೈದ್ಯಾಧಿಕಾರಿಯಾಗಿ ಸುಧೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ| ಸಾಯಿಗೀತಾ ಜ್ಞಾನೇಶ್ ರವರು ಜು. 31 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.
ಇವರು ಸುಳ್ಯದ ಪ್ರತಿಷ್ಟಿತ ಕುರುಂಜಿ ಮನೆತನದವರಾಗಿದ್ದು ದಿ. ಕರುಣಾಕರ ಗೌಡ ಮತ್ತು ಶ್ರೀಮತಿ ಅನುಸೂಯ ದಂಪತಿಗಳ ಪುತ್ರಿ. ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸತ್ಯಸಾಯಿ ಲೋಕಸೇವಾ ವೃಂದ ಅಳಿಕೆಯಲ್ಲಿ ಪಡೆದು, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಎಸ್. ಡಿ. ಎಂ.ಕಾಲೇಜು ಉಜಿರೆಯಲ್ಲಿ ಪೂರೈಸಿರುತ್ತಾರೆ.
ಬಳಿಕ ಬೆಂಗಳೂರಿನ ಪ್ರತಿಷ್ಠಿತ ಕೆಂಪೇ ಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಶಿಕ್ಷಣವನ್ನುಪೂರೈಸಿರುತ್ತಾರೆ.















ನಂತರ ಸುಳ್ಯದ ಕುರುಂಜಿ ಕಾರ್ ಜನರಲ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ಸೇವೆಯನ್ನು ಮೆಡಿಕಲ್ ಡೈರೆಕ್ಟರ್ ಡಾ| ಕೆ. ವಿ. ಚಿದಾನಂದ ರವರ ಮಾರ್ಗದರ್ಶನದಲ್ಲಿ ಆರಂಭಿಸಿದರು. 1990 ರಿಂದ 1992 ರ ತನಕ ಕೆವಿಜಿದಂತಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
1993 ರಿಂದ 1995 ರವರೆಗೆ ಹುಬ್ಬಳ್ಳಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಬಳಿಕ ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಹಾಗೂ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ವೈದ್ಯಾಧಿಕಾರಿಯಾಗಿ ತಮ್ಮ ಸೇವೆಯನ್ನು ಮುಂದುವರಿಸಿರುತ್ತಾರೆ.
1996 ನವಂಬರ್ 7 ರಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಉದ್ಯಾನವನ ಆಸ್ಪತ್ರೆಯಲ್ಲಿ ಖಾಯಂವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದು ಸುದೀರ್ಘ 29 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಜು. 31 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ .
ಇವರು ಪೆರಾಜೆ ಗ್ರಾಮದ ನಿಡ್ಯಮಲೆ ಕುಟುಂಬದ ದಿ. ಅನಂತ (ನ್ಯಾಯವಾದಿ) ಹಾಗೂ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ ರವರ ಪುತ್ರ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜ್ಞಾನೇಶ್ ರವರನ್ನು 1993 ಫೆಬ್ರವರಿ 14ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದು ಓರ್ವ ಪುತ್ರ ಡಾ| ಸತ್ಯ ಸ್ವರೂಪ್ ಬೆಂಗಳೂರಿನ ಅಸ್ಟರ್ ವೈಟ್ ಫೀಲ್ಡ್ ನಲ್ಲಿ ಆರ್ಥೋಪೆಡಿಕ್ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಓರ್ವ ಪುತ್ರಿ ಡಾ| ಸಾಯಿ ಮಲ್ಲಿಕಾ ಎಂ.ಬಿ.ಬಿ.ಎಸ್ ಪದವಿ ಪೂರೈಸಿದ್ದು ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಅಧ್ಯಯನ ನಡೆ ಸುತ್ತಿದ್ದಾರೆ.
ಡಾ|ಸಾಯಿಗೀತಾ ರವರ ಸಹೋದರ ಸತ್ಯ ಪ್ರಸಾದ್ ಕುರುಂಜಿ ಸ್ನಾತಕೋತ್ತರ ಪದವಿ ಪೂರೈಸಿ ಪ್ರಸ್ತುತ ಸುಳ್ಯದಲ್ಲಿ ಉದ್ಯಮಿಯಾಗಿದ್ದಾರೆ. ಸಹೋದರಿ ಶ್ರೀಮತಿ ಸಾಯಿ ಪ್ರಸನ್ನ ವಿಶ್ವಾಸ್ ರವರು ಸತ್ಯಸಾಯಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.
ಪ್ರಸ್ತುತ ಡಾ |ಸಾಯಿಗೀತಾ ಜ್ಞಾನೇಶ್ ರವರು ಸುಳ್ಯದ ಕೇರ್ಪಳದಲ್ಲಿ ವಾಸಿಸುತ್ತಿದ್ದಾರೆ.










