ಸ್ಥಳೀಯರಿಂದ ತೆರವು ಕಾರ್ಯಾಚರಣೆ
ಸುಳ್ಯದ ಕೇರ್ಪಳ ಬಳಿ ಮುಖ್ಯರಸ್ತೆಗೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದು ಅಲ್ಪಸಮಯ ರಸ್ತೆ ಸಂಚಾರ ತೊಡಕು ಉಂಟಾದ ಘಟನೆ ಇಂದು ಆ 4 ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ಸಂಭವಿಸಿದೆ.
















ಕೇರ್ಪಳ ಮೆಸ್ಕಾಂ ಕಚೇರಿಯ ಬಳಿ ಈ ಘಟನೆ ನಡೆದಿದ್ದು ಬೆಳಗ್ಗಿನ ಜಾವ ದ್ವಿಚಕ್ರ ವಾಹನದಲ್ಲಿ ಈ ರಸ್ತೆಯಲ್ಲಿ ಬಂದ ಯುವಕನೋರ್ವ ಈ ಮರಕ್ಕೆ ಡಿಕ್ಕಿಯಾಗಿ ಬಿದ್ದ ಘಟನೆಯು ಕೂಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಘಟನೆ ತಿಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಬಂದು ಮರದ ಗೊಂಬೆಯನ್ನು ಕತ್ತರಿಸಿ ತೆರವು ಮಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸುನಿಲ್ ಕೇರ್ಪಳ ರವರ ನೇತೃತ್ವದಲ್ಲಿ ಯುವಕರ ತಂಡ ತೆರವು ಕಾರ್ಯಚರಣೆಯನ್ನು ಮಾಡಿದ್ದಾರೆ.










