ಅಧ್ಯಕ್ಷರಾಗಿ ಅರುಣ ಕುಮಾರ್,
ಕಾರ್ಯದರ್ಶಿಯಾಗಿ ಯಕ್ಷಿತ್ ಬೊಳ್ಳೂರು
ಗರುಡ ಯುವಕ ಮಂಡಲ ಚೊಕ್ಕಾಡಿ ಇದರ 25ನೇ ವರ್ಷದ ವಾರ್ಷಿಕ ಮಹಾಸಭೆ ಆ. 03ರಂದು ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಭಾಭವನದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಮನೋಜ್ ಪಡ್ಪುರವರ ಅಧ್ಯಕ್ಷತೆಯಲ್ಲಿ ಜರುಗಿತು.















ಸಾಂಸ್ಕೃತಿಕ ಕಾರ್ಯದರ್ಶಿ ಮೋಹನ್ ಆಚಾರ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಅರುಣ ಕುಮಾರ್ ಮುಂಡಾಜೆ 2024-25ನೇ ಸಾಲಿನ ವರದಿ ವಾಚಿಸಿದರು. ಖಜಾಂಚಿ ವಿಜೇತ್ ಕೊಳಂಬೆಯವರು ಕಳೆದ ಸಾಲಿನ ಆಯ-ವ್ಯಯ ಪಟ್ಟಿಯನ್ನು ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2025-26 ನೇ ಸಾಲಿನ
ಅಧ್ಯಕ್ಷರಾಗಿ ಅರುಣ ಕುಮಾರ್ ಮುಂಡಾಜೆ, ಉಪಾಧ್ಯಕ್ಷರಾಗಿ ಶರಣ್ ಕರ್ಮಜೆ, ಕಾರ್ಯದರ್ಶಿಯಾಗಿ ಯಕ್ಷಿತ್ ಬೊಳ್ಳೂರು, ಖಜಾಂಚಿಯಾಗಿ ವಿಜೇತ್ ಕೊಳಂಬೆ, ಜತೆ ಕಾರ್ಯದರ್ಶಿಯಾಗಿ ವಿನಯ್ ಪಾಡಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ವರ್ಷಿತ್ ಕರ್ಮಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ ಆಚಾರ್ಯ, ಸಾಮಾಜಿಕ ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ, ಮಾಧ್ಯಮ ಕಾರ್ಯದರ್ಶಿಯಾಗಿ ಅಭಿಜಿತ್ ಕೊಳಂಬೆ, ನಿರ್ದೇಶಕರುಗಳಾಗಿ ಮಿಥುನ್ ಪಾಡಾಜೆ, ಸಂಜನ್ ಚೊಕ್ಕಾಡಿ, ಧನುಷ್ ಕಾಯರ, ಯೋಗಿತ್ ಕೊಳಂಬೆ, ಸುಜನ್ ಚೆನ್ನಮಲೆ ಅವಿರೋಧವಾಗಿ ಆಯ್ಕೆಯಾದರು.

ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಶ್ರೀಧರ್ ಕರ್ಮಜೆ, ಯುವಜನ ಸಂಯುಕ್ತ ಮಂಡಳಿಯ ಸಾಂಸ್ಕೃತಿಕ ಕಾರ್ಯದರ್ಶಿ ಮುರಳಿ ನಳಿಯಾರು, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಅನಿಲ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಅರುಣ್ ಕುಮಾರ್ ಮುಂಡಾಜೆ ಸ್ವಾಗತಿಸಿ, ಯಕ್ಷಿತ್ ಬೊಳ್ಳೂರು ವಂದಿಸಿದರು.










