ಗಾಂಧಿನಗರ ಕೆ ಪಿ ಎಸ್ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಪೋಲಿಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಮತಿ ಸರಸ್ವತಿ ರವರು ಭಾಗವಹಿಸಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯಿಂದಾಗುವ ಅಪಾಯಗಳು, ಅವುಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸಿಕೊಳ್ಳುವ ಬಗೆ ಹಾಗೂ ಮಾದಕ ದ್ರವ್ಯಗಳ ಬಳಕೆ ಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.

ಎಲ್ಲಾದರೂ ಅವುಗಳ ಬಳಕೆ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡುವಂತೆ ಮಾಹಿತಿ ನೀಡಿದರು.ಪೊಕ್ಸೊ ಕಾಯಿದೆಗಳು ಹಾಗೂ ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಹೆಚ್ಚಿಸಿಕೊಳ್ಳಲು ಪೋಷಕರಿಗೆ ಕರೆ ನೀಡಿದರು.















ಸರ್ಕಾರದ ಕಾರ್ಯಕ್ರಮಗಳಾದ ಕಲಿಕಾ ಸಾಮರ್ಥ್ಯ ಗಳಿಸದ
ವಿದ್ಯಾರ್ಥಿಗಳಿಗೆ ಎಫ್.ಎಲ್.ಎನ್ ಮತ್ತು ಇದೀಗ ಹೊಸ ರೀತಿಯ ಪರೀಕ್ಷಾ ಕ್ರಮ ಎಲ್.ಬಿ.ಎ ಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಶಿಕ್ಷಕರಾದ ಶ್ರೀಮತಿ ಶಹನಾಜ್ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜ್ಯೋತಿಲಕ್ಷಿ ಟಿ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಯಶ್ವಿನಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.










