ಅಜ್ಜಾವರ ಗ್ರಾಮದ ಸ. ಉ. ಹಿ. ಪ್ರಾ. ಶಾಲೆ ಕಾಂತಮಂಗಲ, ಇಕೋ ಕ್ಲಬ್ ಸಹಯೋಗದೊಂದಿಗೆ ಶಾಲಾ ಸಮೀಪದ ಪುತ್ತಿಲ ಗದ್ದೆಯಲ್ಲಿ ಕೆಸರುಗದ್ದೆ ಆಟ, ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಗದ್ದೆಯ ಮಾಲೀಕರಾದ ಶ್ರೀಯುತ ಮನಮೋಹನ ಪುತ್ತಿಲ ಉದ್ಘಾಟಿಸಿ, ಬತ್ತದ ಬೇಸಾಯದ ಮಹತ್ವ, ಮಣ್ಣಿನಲ್ಲಿ ಆಟ ಆಡುವುದರಿಂದ ಸಿಗುವ ಪ್ರಯೋಜನಗಳನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ತುಳಸಿ ಮನಮೋಹನ, ಎಸ್ಡಿಎಂಸಿ ಅಧ್ಯಕ್ಷರು , ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು .ವಿದ್ಯಾರ್ಥಿಗಳಿಗೆ ನೇಜಿ ನೆಡುವುದರ ಪ್ರಾತ್ಯಕ್ಷಿಕೆಯನ್ನು ಪಾಡ್ದನ ಹೇಳುವುದರ ಮೂಲಕ ತೋರಿಸಲಾಯಿತು. ನಂತರ ನೆರೆದ ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಕೆಸರುಗದ್ದೆಯಲ್ಲಿ ನಡೆಸಲಾಯಿತು . ಮಣ್ಣಿನ ಸೊಗಡನ್ನು ಅನುಭವಿಸಿದ ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಖುಷಿ ಪಟ್ಟರು.
ಈ ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಶಾಲಾಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಊರವರು ಸಹಕರಿಸಿದರು.


























